ಕೊಲ್ಲಾಪುರದಲ್ಲಿ ಭೂಕುಸಿತ : 21 ಮಂದಿ ಸಾವು
ಮುಂಬೈ : ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿ 21 ಮಂದಿ ಸಾವನ್ನಪ್ಪಿದ್ದಾರೆ.
ಕೊಲ್ಲಾಪುರದ ಧೋಕವಾಲೆ, ಮಿಗಾರ್ಂವ್ ನಲ್ಲಿ ನಿನ್ನೆ ಭೂ ಕುಸಿತ ಉಂಟಾಗಿದ್ದು, ಅಂದಾಜು 21 ಮಂದಿ ಮೃತಪಟ್ಟಿದ್ದಾರೆ.
ಅವಘಡದಲ್ಲಿ 8 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಎನ್ ಡಿಆರ್ ಎಫ್ ತಂಡ ಶೋಧ ಕಾರ್ಯ ನಡೆಸುತ್ತಿದೆ.
ಸದ್ಯದಲ್ಲಿ ಕೊಲ್ಲಾಪುರ ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದುವರೆದಿದೆ.
ಗಗನ್ ಬೌಡಾ ತಾಲೂಕಿನ ಧುಂಡ್ ವಾಡೆ ಗ್ರಾಮದ ರಸ್ತೆ ಕುಸಿದಿದ್ದು, ಅಂಡೂರು ಅಣೆಕಟ್ಟು ಕುಸಿಯುವ ಭೀತಿ ಶುರುವಾಗಿದೆ.