ಭೂ ಕುಸಿತದಲ್ಲಿ ಮುಳುಗಿದ ಸೇನಾ ಶಿಬಿರ – ಅವಶೇಷಗಳಡಿ ಸಿಲುಕಿದ ಸೈನಿಕರು
ಬುಧವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈಶಾನ್ಯ ಭಾರತದ ಮಣಿಪುರದಲ್ಲಿ ಸೇನಾ ಸಿಬ್ಬಂದಿಯ ಶಿಬಿರದ ಮೇಲೆ ಭೂ ಕುಸಿತ ಸಂಭವಿಸಿದೆ. ತುಪುಲ್ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಇದುವರೆಗೆ ಇಬ್ಬರ ಮೃತದೇಹಗಳ ಪತ್ತೆಯಾಗಿವೆ. ಅವಶೇಷಗಳಡಿಯಲ್ಲಿ ಹಲವು ಸೈನಿಕರು ಸಲುಕಿರುವ ಶಂಕೆ ವ್ಯಕ್ತವಾಗಿದೆ.
ತುಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಶಿಬಿರದಲ್ಲಿ ಭೂಕುಸಿತದಿಂದಾಗಿ 50 ಕ್ಕೂ ಹೆಚ್ಚು ಜನರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದು, ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ನೋನಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
https://twitter.com/i/status/1542414395103268865
ರೈಲು ಮಾರ್ಗ ನಿರ್ಮಾಣದ ವೇಳೆ ಈ ಘಟನೆ
ಮಾಹಿತಿಯ ಪ್ರಕಾರ ಜಿರಿಬಾಮ್ ನಿಂದ ಇಂಫಾಲ್ ಗೆ ರೈಲ್ವೆ ಮಾರ್ಗ ನಿರ್ಮಿಸುತ್ತಿರುವ ವೇಳೆ ಅವರ ಭದ್ರತೆಗಾಗಿ 107 ಪ್ರಾದೇಶಿಕ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಭೂಕುಸಿತ ಸಂಭವಿಸಿದೆ. ಗುರುವಾರ ಬೆಳಗ್ಗೆ ಸೇನೆ, ಅಸ್ಸಾಂ ರೈಫಲ್ಸ್, ಮಣಿಪುರ ಪೊಲೀಸರು ಬೃಹತ್ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
https://twitter.com/i/status/1542336931853348865
ಮಣಿಪುರದಿಂದ ಸಿಎಂ ಜೊತೆ ಅಮಿತ್ ಶಾ ಮಾತುಕತೆ
ಈ ಘಟನೆಯ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ಮಣಿಪುರದ ತುಪುಲ್ ರೈಲ್ವೆ ನಿಲ್ದಾಣದ ಬಳಿ ಭೂಕುಸಿತದ ಹಿನ್ನೆಲೆಯಲ್ಲಿ ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಮತ್ತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಎನ್‌ಡಿಆರ್‌ಎಫ್ ತಂಡವು ತಲುಪಿದೆ ಎಂದು ಮಾಹಿತಿ ಪಡೆದುಕೊಂಡಿದ್ದರು.








