ಕಂಪ್ಯೂಟರ್ ಪ್ರೋಗ್ರಾಮ್ ನಲ್ಲಿ ‘ಕಟ್, ಕಾಪಿ, ಪೇಸ್ಟ್’ ಎಂಬ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ ವಿಜ್ಞಾನಿ ಲ್ಯಾರಿ ಟೆಸ್ಲರ್(74 ವರ್ಷ) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಂಪ್ಯೂಟರ್ ವಿಜ್ಞಾನಿ ಲ್ಯಾರಿ ಟೆಸ್ಲರ್ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
1973ರಲ್ಲಿ ಕ್ಸೆರಾಕ್ಸ್ ಪಾಲೋ ಆಲ್ಟೋ ರಿಸರ್ಚ್ ಸೆಂಟರ್ಗೆ ಕೆಲಸಕ್ಕೆ ಸೇರಿದ್ದ ಟೆಸ್ಲರ್ , ಕಟ್, ಕಾಪಿ ಮತ್ತು ಪೇಸ್ಟ್ ಅನ್ನು ಸಂಶೋಧಿಸಿ ಕಂಪ್ಯೂಟರ್ ಜಗತ್ತಿಗೆ ಕೊಡುಗೆ ನೀಡಿದ್ದರು. 70ರ ದಶಕದಲ್ಲಿ ಆ್ಯಪಲ್ ಕಂಪ್ಯೂಟರ್ ಅಭಿವೃದ್ಧಿಯಲ್ಲಿ ಟೆಸ್ಲರ್ ಕಾರ್ಯ ನಿರ್ವಹಿಸಿದ್ದಾರೆ. 1976ರಲ್ಲಿ ಬ್ರೌಸರ್ ಶಬ್ದವನ್ನು ಹುಟ್ಟು ಹಾಕಿದ ಟೆಸ್ಲರ್. ಯಾಹೂ ಸಂಸ್ಥೆಯಲ್ಲೂ ಕಾರ್ಯ ನಿರ್ವಹಿಸಿ ತಮ್ಮ ಜ್ಞಾನವನ್ನ ಧಾರೆಯೆರದಿದ್ದರು.
ಟೆಸ್ಲರ್ ಸಾವಿಗೆ ಕ್ಸೆರಾಕ್ಸ್, ಆ್ಯಪಲ್ ಸೇರಿ ಸಾಕಷ್ಟು ಪ್ರತಿಷ್ಠಿತ ಸಂಸ್ಥೆಗಳು ಸಂತಾಪ ಸೂಚಿಸಿವೆ. ತಾಂತ್ರಿಕ ಲೋಕಕ್ಕೆ ಟೆಸ್ಲರ್ ಅವರ ಕೊಡುಗೆ ಸರ್ವಕಾಲಕ್ಕೂ ಸ್ಮರಣೀಯವಾಗಿದೆ.