ಲಷ್ಕರ್-ಎ-ಮುಸ್ತಫಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಿದಾಯತುಲ್ಲಾ ಮಲಿಕ್ ಬಂಧನ
ಅನಂತ್‌ನಾಗ್, ಫೆಬ್ರವರಿ07: ಲಷ್ಕರ್-ಎ-ಮುಸ್ತಫಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಿದಾಯತುಲ್ಲಾ ಮಲಿಕ್ ನನ್ನು ಬಂಧಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ (ಫೆಬ್ರವರಿ 6, 2021) ತಿಳಿಸಿದ್ದಾರೆ.
ಜಮ್ಮು ಮತ್ತು ಅನಂತ್‌ನಾಗ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಲಿಕ್ ನನ್ನು ಜಮ್ಮುವಿನಲ್ಲಿ ಬಂಧಿಸಲಾಗಿದೆ.
ಶನಿವಾರ, ಮಧ್ಯಾಹ್ನ 03: 30 ಕ್ಕೆ ಕುಂಜ್ವಾನಿ ಜಮ್ಮುವಿನಲ್ಲಿ ಜಮ್ಮು ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಜಂಟಿ ಕಾರ್ಯಾಚರಣೆಯ ಸಮಯದಲ್ಲಿ, ಭಯೋತ್ಪಾದಕ, ಪೊಲೀಸರ ಮೇಲೆ ದಾಳಿ ಮಾಡಿ ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ ತಂಡವು ಅವನನ್ನು ಚಾತುರ್ಯದಿಂದ ಬಂಧಿಸಿತು ಏಕೆಂದರೆ ಜಮ್ಮುವಿನ ಕುಂಜ್ವಾನಿ ಪ್ರದೇಶವು ತುಂಬಾ ಜನದಟ್ಟಣೆಯ ಸ್ಥಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿದಾಯತುಲ್ಲಾ ಮಲಿಕ್ ನ ಬಳಿ ಎರಡು ಪಿಸ್ತೂಲ್ ಮತ್ತು ಗ್ರೆನೇಡ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ಹೇಳಿದರು.
ನೇಪಾಳ – ಪ್ರಧಾನಿ ಒಲಿ ನೇತೃತ್ವದ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಮುಷ್ಕರ
ಮಲಿಕ್ ಶೋಪಿಯಾನ್ ಜಿಲ್ಲೆಯ ವರ್ಗೀಕೃತ ಭಯೋತ್ಪಾದಕ ಮತ್ತು ಕಾಶ್ಮೀರದ ಜೈಶ್-ಎ-ಮೊಹಮ್ಮದ್ ನ ಒಂದು ಅಂಗವಾಗಿರುವ ಲಷ್ಕರ್-ಎ-ಮುಸ್ತಫಾದ ಮುಖ್ಯಸ್ಥ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದರು.
ಪೊಲೀಸರ ಪ್ರಕಾರ, ಮೊದಲ ಬಂಧನ ಅನಂತ್‌ನಾಗ್‌ನ ಅಯಾಜ್ ಭಟ್. ಇವನಿಂದ 2021 ರ ಜನವರಿ 18 ರಂದು ಒಂದು ಪಿಸ್ತೂಲ್ ವಶಪಡಿಸಿಕೊಳ್ಳಲಾಯಿತು, ಮತ್ತು ಆತನ ಮಾಹಿತಿಯ ಮೇರೆಗೆ, ಪಂಪೋರ್‌ನ ರೇಯೀಸ್ ಮಿರ್ ಮತ್ತು ಶೋಪಿಯಾನ್‌ನ ಶಕೀರ್ ಇಟೂ ಎಂಬ ಇಬ್ಬರು ಭಯೋತ್ಪಾದಕ ಸಹಚರರನ್ನು ಬಂಧಿಸಲಾಯಿತು. ಅವರ ಬಳಿಯಿಂದ ಎರಡು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ತರುವಾಯ, ಅನಂತ್‌ನಾಗ್ ಮೂಲದ ನಾಲ್ಕು ಭಯೋತ್ಪಾದಕ ಸಹಚರರನ್ನು ಬಂಧಿಸಲಾಯಿತು ಮತ್ತು ಎರಡು ಪಿಸ್ತೂಲ್‌ಗಳು, ಎಕೆ -47 ಮತ್ತು ಕೈ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖೆಯ ಮುಂದಿನ ಅವಧಿಯಲ್ಲಿ, ಭಯೋತ್ಪಾದಕ ಹಿದಾಯತುಲ್ಲಾ ಮಲಿಕ್ ಜಮ್ಮುವಿನ ಬತಿಂಡಿ ಪ್ರದೇಶದಲ್ಲಿ ನೆಲೆಸಿದ್ದಾನೆ ಮತ್ತು ಜಮ್ಮು ನಗರದಲ್ಲಿ ದೊಡ್ಡ ದಾಳಿಯನ್ನು ಯೋಜಿಸುತ್ತಿದ್ದಾನೆ ಎಂದು ಬಂಧಿತ ಭಯೋತ್ಪಾದಕ ಸಹಚರರು ಬಹಿರಂಗಪಡಿಸಿದ್ದರು.
ಅದರಂತೆ, ಕಾರ್ಯಾಚರಣೆಯನ್ನು ಪ್ರಾರಂಭಿಸಲು ಅನಂತ್‌ನಾಗ್ ಪೊಲೀಸರ ವಿಶೇಷ ತಂಡವನ್ನು ರಚಿಸಿ ಜಮ್ಮುವಿಗೆ ನಿಯೋಜಿಸಲಾಯಿತು.
ಪುಲ್ವಾಮಾ ಪ್ರಕರಣದ (ಮೇ 27, 2020) ಹತ್ತು ಮಂದಿ ಆರೋಪಿಗಳಲ್ಲಿ ಭಯೋತ್ಪಾದಕ ಹಿದಾಯತುಲ್ಲಾ ಒಬ್ಬನಾಗಿದ್ದ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಹಾ ಪ್ರಿಯರು ತಿಳಿದುಕೊಂಡಿರಬೇಕಾದ ಅತಿ ಮುಖ್ಯ ಮಾಹಿತಿಗಳು https://t.co/qRjNOVqDe4
— Saaksha TV (@SaakshaTv) February 3, 2021
ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ – ಇಲ್ಲಿದೆ ಮಾಹಿತಿ https://t.co/emIFsqWiAo
— Saaksha TV (@SaakshaTv) February 4, 2021