Lata Mangeshkar: ಗಾನ ಕೋಗಿಲೆ ಹಾಡು.. ಒಬ್ಬೊಬ್ಬರಿಗೆ ಒಂದು ಲಕ್ಷ lata-mangeshkar-raised-money saaksha tv
ಲತಾ ಮಂಗೇಶ್ಕರ್ ಕ್ರಿಕೆಟ್ ಗೆ ವೀರಾಭಿಮಾನಿ. ಕ್ರಿಕೆಟ್ ಜೊತೆ ಅವರಿಗಿದ್ದ ಅನುಬಂಧದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾದ ಘಟನೆ ಮಾತ್ರ 1983ರಲ್ಲಿ ನಡೆಯಿತು.
ಭಾರತ ತಂಡ ಇಂಗ್ಲೆಂಡ್ ನಲ್ಲಿ ನಡೆದ ವರ್ಲ್ಡ್ ಕಪ್ ಗೆದ್ದು ಸ್ವದೇಶಕ್ಕೆ ವಾಪಸ್ ಆಗಿತ್ತು. ವಿಜೇತರನ್ನು ಅಭಿನಂಧಿಸಿ ನಗದು ಪುರಸ್ಕಾರ ನೀಡಬೇಕು ಎಂದು ಬಿಸಿಸಿಐ ಭಾವಿಸಿತ್ತು.
ಆದ್ರೆ ಬೋರ್ಡ್ ಆಗಿದ್ದ ಆರ್ಥಿಕ ಪರಿಸ್ಥಿತಿ ಅದು ಅಸಾಧ್ಯವಾಗಿತ್ತು. ಪ್ರಪಂಚ ಕಪ್ ನಡೆದ ಸಂದರ್ಭದಲ್ಲಿ ಕ್ರಿಕೆಟಿಗರಿಗೆ ಖರ್ಚಿಗೆ ಎಂದು ತಲಾ 20 ಪೌಂಡ್ಸ್ ಕೊಡೋದಕ್ಕೆ ಪರದಾಡುತ್ತಿದ್ದರು.
ಹೀಗಿದ್ದಾಗ ಪ್ರೋತ್ಸಾಹ ಧನ ಎಲ್ಲಿಂದ ಕೊಡೋಕೆ ಸಾಧ್ಯ..? ಅಂತಾ ಯೋಚಿಸುತ್ತಿದ್ದ ಸಂದರ್ಭದಲ್ಲಿಯೇ ಬಿಸಿಸಿಐ ಅಧಿಕಾರಿ ರಾಜ್ ಸಿಂಗ್ ದುಂಗಾರ್ಪುರ್ ಹೊಸ ಅಲೋಚನೆಯೊಂದಿಗೆ ಮುಂದೆ ಬಂದರು.
ಆ ಸಮಯದಲ್ಲಿ ಭಾರತ ಸಿನಿಮಾ ಸಂಗೀತವನ್ನು ಶಾಸಿಸುತ್ತಿದ್ದ ತಮ್ಮ ಸ್ನೇಹಿತೆ ಲತಾ ಮಂಗೇಶ್ಕರ್ ಅವರ ಬಳಿ ಹೋಗಿ, ಒಂದು ಪ್ರತ್ಯೇಕ ಕಾರ್ಯಕ್ರಮ ನಡೆಸಿಕೊಡಿ ಎಂದು ಮನವಿ ಮಾಡಿಕೊಂಡರು.
ಇದಕ್ಕೆ ಲತಾ ಮಂಗೇಶ್ಕರ್ ಅವರು ಯಾವುದೇ ಅಡ್ಡಿ ಹೇಳದೇ ಓಕೆ ಎಂದಿದ್ದರು. ಡಿಲ್ಲಿಯಲ್ಲಿನ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ನಡೆದ ಆ ಕಾರ್ಯಕ್ರಮಕ್ಕೆ ಭಾರಿ ಮಟ್ಟದಲ್ಲಿ ಅಭಿಮಾನಿಗಳು ಆಗಮಿಸಿದ್ದರು.
ಇದರಿಂದ ಸುಮಾರು 20 ಲಕ್ಷ ರುಪಾಯಿ ಬಂದಿತ್ತು. ಈ ಹಣದಲ್ಲಿ ಭಾರತ ತಂಡದ ಸದಸ್ಯರಿಗೆ ತಲಾ ಒಂದೊಂದು ಲಕ್ಷ ನೀಡಲಾಯಿತು.
ಅಲ್ಲಿಂದ ಲತಾ ಮಂಗೇಶ್ಕರ್ ಅವರಿಗೂ ಮತ್ತು ಭಾರತೀಯ ಕ್ರಿಕೆಟ್ ಗೆ ಅನುಬಂಧ ಏರ್ಪಟ್ಟಿತ್ತು.
ಅಲ್ಲದೇ ಅಂದಿನಿಂದ ಇಂದಿನವರೆಗೂ ಭಾರತದಲ್ಲಿ ನಡೆಯುವ ಯಾವುದೇ ಅಂತಾರಾಷ್ಟ್ರೀಯ ಮ್ಯಾಚ್ ಗೆ ಎರಡು ವಿವಿಐಪಿ ಸೀಟ್ ಗಳು ಲತಾ ಮಂಗೇಶ್ಕರ್ ಅವರಿಗೆ ಕಾಯ್ದಿರಿಸಲಾಗುತ್ತಿದೆ.