ರಾಜ್ಯದ ಪ್ರಮುಖ ಸುದ್ದಿಗಳು : LATEST UPDATES
ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ
ವರನಟ ಡಾ. ರಾಜ್ ಕುಮಾರ್ ಗೆ ಅವಮಾನ : ನಾಲಿಗೆ ಹರಿಬಿಟ್ಟ ಶಾಸಕ ಹ್ಯಾರಿಸ್
ವರನಟ ಡಾ. ರಾಜ್ ಕುಮಾರ್ ಗೆ ಅವಮಾನ : ನಾಲಿಗೆ ಹರಿಬಿಟ್ಟ ಶಾಸಕ ಹ್ಯಾರಿಸ್
ಬೆಂಗಳೂರು: ರಾಜ್ಕುಮಾರ್ ಅವ್ರ ದೊಮ್ಮಲೂರು ಭಾಗದಲ್ಲಿರುವ ಅಣ್ಣಾವ್ರ ಸ್ಟ್ಯಾಚೂ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಶಾಸಕ ಹ್ಯಾರಿಸ್ ಮತ್ತೆ ಅಣ್ಣವ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾದ ವಿಡಿಯೋ ಹರಿದಾಡ್ತಿದ್ದು, ಡಾ. ರಾಜ್ಕುಮಾರ್ ಅವ್ರ ಬಗ್ಗೆ ಹ್ಯಾರಿಸ್ ನಾಲಿಗೆ ಹರಿಬಿಟ್ಟಿರುವುದು ಸ್ಪಷ್ಟವಾಗಿದೆ. ವಿಡಿಯೋದಲ್ಲಿ ಅವರ್ಯಾರೋ ರಾಜ್ಕುಮಾರ್ ಗೆ ಅಂತಾ ಮಾಡಿರ್ತಾರೆ. ಸ್ಟ್ಯಾಚೂ ಇಡೋದೆ ದೊಡ್ಡದು, ಪ್ರೋಟೆಕ್ಷನ್ ಬೇರೆ ಕೊಡೋದಕ್ಕೆ ಆಗುತ್ತಾ. ರಾಜ್ಕುಮಾರ್ ಪ್ರತೀಮೆಗೇನು ಪ್ರೊಟೆಕ್ಷನ್ ಬೇಕಾಗಿಲ್ಲ. ಭದ್ರತೆ ಬೇಕು ಅಂದ್ರೆ ರಸ್ತೆಲಿ ಯಾಕೆ ಪ್ರತಿಮೆ ಇಡ್ಬೇಕು ಮನೆಯಲ್ಲಿ ಇಟ್ಟುಕೊಳ್ಳಲಿ ಅಲ್ವಾ ಎಂದು ಹ್ಯಾರಿಸ್ ಹೇಳಿಕೆ ನೀಡಿದ್ದಾರೆ.
ರಾಜ್ಯಾದ್ಯಂತ ಮೆಡಿಕಲ್ ಕಾಲೇಜು, ಆಸ್ಪತ್ರೆ ಮಾಲೀಕರಿಗೆ ಐಟಿ ಶಾಕ್
ರಾಜ್ಯಾದ್ಯಂತ ಮೆಡಿಕಲ್ ಕಾಲೇಜು, ಆಸ್ಪತ್ರೆ ಮಾಲೀಕರಿಗೆ ಐಟಿ ಶಾಕ್
ಬೆಂಗಳೂರು : ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಐಟಿ ಅಧಿಕಾರಿಗಳು ಮೆಡಿಕಲ್ ಕಾಲೇಜು, ಆಸ್ಪತ್ರೆ ಮಾಲೀಕರಿಗೆ ಶಾಕ್ ನೀಡಿದ್ದಾರೆ.
ಪ್ರತಿಷ್ಠಿತ ಉದ್ಯಮಿಗಳ ಹಲವು ಮೆಡಿಕಲ್ ಕಾಲೇಜು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಮೆಡಿಕಲ್ ಕಾಲೇಜು, ಕುಂಬಳಗೊಡಿನ ಪ್ರತಿಷ್ಠಿತ ಬಿಜಿಎಸ್ ಶಿಕ್ಷಣ ಸಂಸ್ಥೆ, ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜು,
ತುಮಕೂರಿನ ಶ್ರೀದೇವಿ ಕಾಲೇಜು, ಮಂಗಳೂರಿನ ಖ್ಯಾತ ಉದ್ಯಮಿ ಬಿ ಆರ್ ಶೆಟ್ಟಿ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಲ್ಲಿ ಕೊರೊನಾ ಸ್ಫೋಟ : ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಹೊಸ ರೂಲ್ಸ್
ಬೆಂಗಳೂರಲ್ಲಿ ಕೊರೊನಾ ಸ್ಫೋಟ : ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಹೊಸ ರೂಲ್ಸ್
ಬೆಂಗಳೂರು : ನಗರದ ಬೊಮ್ಮನಹಳ್ಳಿ ಬಿಳೇಕಳ್ಳಿಯ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಕೊರೊನಾ ಸ್ಫೋಟಗೊಂದಿದ್ದು, ಈವರೆಗೂ 103 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಬಿಬಿಎಂಪಿ ಈಗ ಹೊಸ ರೂಲ್ಸ್ ಜಾರಿ ಮಾಡಿದೆ.
ಹೊಸ ನಿಯಮಗಳು
ಈ ಅಪಾರ್ಟ್ ಮೆಂಟ್ ಗೆ ಹೊರಗಿನವರು ಪ್ರವೇಶಿಸುವಂತಿಲ್ಲ
ಅಪಾರ್ಟ್ ಮೆಂಟ್ ನಿವಾಸಿಗಳು ಹೋಂ ಕ್ವಾರಂಟೈನ್ಸ್ ಮುಗಿಸಿಯೇ ಹೊರಗೆ ಬರಬೇಕು
ಅಪಾರ್ಟ್ ಮೆಂಟ್ ಒಳಗಡೆ ಪಾರ್ಟಿ, ಸಭೆ ಮಾಡುವಂತಿಲ್ಲ.
ಅಪಾರ್ಟ್ ಮೆಂಟ್ ಕಾಮನ್ ಏರಿಯಾ ಬಳಕೆಗೂ ನಿರ್ಬಂಧ
ರೋಗಿಗಳನ್ನು ಕುಟುಂಬ ಸದಸ್ಯರಂತೆ ಕಾಣಬೇಕು : ಸಚಿವ ಡಾ.ಕೆ.ಸುಧಾಕರ್
ರೋಗಿಗಳನ್ನು ಕುಟುಂಬ ಸದಸ್ಯರಂತೆ ಕಾಣಬೇಕು : ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು : ವೈದ್ಯರು ಪ್ರತಿ ರೋಗಿಯನ್ನು ತಮ್ಮ ಕುಟುಂಬ ಸದಸ್ಯರಂತೆ ಕಂಡು ಸೇವೆ ನೀಡಿದರೆ ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಸೇವೆ ನೀಡಲು ಸಾಧ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ 3 ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರಿ ಆರೋಗ್ಯ ಕೇಂದ್ರಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ಸಾಮಾನ್ಯ ಜನರು ಹೇಳುತ್ತಾರೆ. ವೈದ್ಯರು ತಮ್ಮ ಕುಟುಂಬದ ಸದಸ್ಯರು ಬಂದಾಗ ಹೇಗೆ ಚಿಕಿತ್ಸೆ ನೀಡುತ್ತಾರೋ ಹಾಗೆಯೇ ಪ್ರತಿ ರೋಗಿಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಲಿರುವ ಬಜೆಟ್ ರಾಜ್ಯದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ನಿರ್ಮಾಣಕ್ಕೆ ಕಾರಣವಾಗಲಿದೆ. ಇದಕ್ಕೆ ವೈದ್ಯರ ಸಹಕಾರ ಅತಿ ಅಗತ್ಯ. ಶೇ.70 ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದು, 20-25% ರಷ್ಟು ಆರೋಗ್ಯ ಕೇಂದ್ರಗಳು ಹಳ್ಳಿಗಳಲ್ಲಿವೆ. ಆದ್ದರಿಂದ ವೈದ್ಯರು ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.
ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ








