ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಮೂಲಕ ಪ್ರಚಾರ ಪ್ರಾರಂಭಿಸಿದ ಜೆ.ಪಿ ನಡ್ಡಾ
ವಿಜಯನಗರ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇನ್ನೂ ಒಂದು ವರ್ಷ ಇರುವಾಗಲೇ, ಚುನಾವಣಾ ಪರ್ವ ಆರಂಭಗೊಂಡಿದ್ದು, ಬಿಜಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ.
ನಿನ್ನೆ (ಭಾನುವಾರ) ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಜರುಗಿದ ರಾಜ್ಯಕಾರ್ಯಕಾರಿಣಿ ಸಭೆ ಹಿನ್ನೆಲೆ ಕುಟುಂಬ ಕುಟುಂಬ ಸಮೇತರಾಗಿ ನಡ್ಡಾ ಆಗಮಿಸಿದ್ದರು. ಈ ವೇಳೆ ಜೆಪಿ ನಡ್ಡಾ ಅವರಿಗೆ ಸಿಟಿ ರವಿ ಕನ್ನಡ ಕಲಿಸಿದರು. ಕನ್ನಡದಲ್ಲಿ ಮಾತನಾಡುವ ಮೂಲಕ ಜೆಪಿ ನಡ್ಡಾ ಅಧಿಕೃತವಾಗಿ ಕನ್ನಡದಲ್ಲಿ ಮಾತನಾಡಿ ಮತ ಬೇಟೆ ಆರಂಭಿಸಿದರು.
ಇನ್ನೂ ಇಂದು ನಡ್ಡಾ ಐತಿಹಾಸಿಕ ಹಂಪಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಮೊದಲು ಹಂಪಿ ಶ್ರೀವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿದ ಜೆಪಿ ನಡ್ಡಾ ಸೇರಿದಂತೆ ಕುಟುಂಬ ಸದಸ್ಯರಿಗೆ ದೇಗುಲದ ಆನೆಯಿಂದ ಪುಷ್ಪ ಮಾಲೆ ಹಾಕಿ ಸ್ವಾಗತ ಕೋರಲಾಯಿತು.
ಬಳಿಕ ಸಾಸಿವೆ ಕಾಳು ಗಣಪ, ಕಡಲೇ ಕಾಳು ಗಣಪ, ಉಗ್ರ ನರಸಿಂಹ, ಕಲ್ಲಿನ ತೇರು ಸೇರಿದಂತೆ ಹಲವು ಸ್ಮಾರಕ ವೀಕ್ಷಣೆ ಮಾಡಿದರು. ಜೊತೆಗೆ ಹಂಪಿ ಇತಿಹಾಸ ಕುರಿತು ನಡ್ಡಾ ಮಾಹಿತಿ ಪಡೆದುಕೊಂಡರು. ನಡ್ಡಾಗೆ ಸಿ.ಟಿ ರವಿ, ನಳಿನ್ ಕುಮಾರ್ ಕಟೀಲ್ ಮತ್ತು ಆನಂದ್ ಸಿಂಗ್ ಅವರ ಕುಟುಂಬ ಸಾಥ್ ನೀಡಿತು.
ಕೊನೆಗೆ ಕನ್ನಡದಲ್ಲಿ ಹೋಗಿ ಬರುವೆ ಎಂದು ಸಿಟಿ ರವಿ ಹೇಳಿಕೊಟ್ಟರು. ಸಿಟಿ ರವಿ ಹೇಳಿದ ಹಾಗೆ ಕನ್ನಡದಲ್ಲಿ ಹೋಗಿ ಬರುವೆ ಎಂದು ನಡ್ಡಾ ಹೇಳಿದರು. ಬಳಿಕ ನಿಮ್ಮ ವೋಟು ಯಾರಿಗೆ ಎಂದು ಸಿಟಿ ರವಿ ಕೇಳಿದರು ನಮ್ಮ ವೋಟ್ ಮೋದಿಗೆ ಎಂದು ಸ್ಥಳೀಯರು ಕೂಗಿದಾಗ ನಡ್ಡಾ ಫುಲ್ ಖುಷ್ ಆದರು.









