ನಾಯಕತ್ವ ಬದಲಾವಣೆ ಚರ್ಚೆ ಆಗಿರೋದು ನಿಜ : ಕೆ.ಎಸ್.ಈಶ್ವರಪ್ಪ
ಬೆಂಗಳೂರು : ಜುಲೈ 26ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಅನ್ನೋದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ನಾಯಕತ್ವ ಬದಲಾವಣೆ ಚರ್ಚೆ ನಮ್ಮಲ್ಲಿ ಆಗಿರುವುದು ನಿಜವಾಗಿದೆ. ನಮ್ಮ ಪಕ್ಷದ ಕೆಲ ನಾಯಕರಿಗೆ ವರಿಷ್ಠರಿಗೆ ಬದಲಾವಣೆಗೆ ಕೇಳಿರುವುದು ನಿಜ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಚರ್ಚೆ ನಮ್ಮಲ್ಲಿ ಆಗಿರುವುದು ನಿಜವಾಗಿದೆ.
ನಮ್ಮ ಪಕ್ಷದ ಕೆಲ ನಾಯಕರಿಗೆ ವರಿಷ್ಠರಿಗೆ ಬದಲಾವಣೆಗೆ ಕೇಳಿರುವುದು ನಿಜ. ಆದರೆ ಈ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಮಾಡುತ್ತದೆ.
ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು. ಇದರೊಂದಿಗೆ ನಾಯಕತ್ವ ಬದಲಾವಣೆ ಪಕ್ಕಾ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ನಾಯಕತ್ವ ಬದಲಾವಣೆ ಉಸಾಬರಿ ಕಾಂಗ್ರೆಸ್ ಗೆ ಯಾಕೆ..? ಅವರ ಪಕ್ಷದ ಸಮಸ್ಯೆ ಮೊದಲು ಬಗೆಹರಿಸಿಕೊಳ್ಳಲಿ.
ನಾಯಕತ್ವ ಬದಲಾವಣೆ ಕಾಂಗ್ರೆಸ್ ಗೆ ಹೇಳಿದವರು ಯಾರು..? ನಮ್ಮ ಆಂತರಿಕ ವಿಚಾರ, ನಾವು ನೋಡಿಕೊಳ್ಳುತ್ತೆವೆ ಎಂದು ವಿರುದ್ಧ ಕಿಡಿಕಾರಿದ್ದಾರೆ.