ನವದೆಹಲಿ: ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಭಾಷಣದ ಮೂಲಕವಲ್ಲ, ಹಣ, ಪಡಿತರ ನೀಡುವ ಮೂಲಕ ಪರಿಹಾರ ನೀಡಿ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಟ್ವಿಟ್ಟರ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವರು, ‘ನಮ್ಮ ಜನರು ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧರಾಗಿದ್ದಾರೆ. ಹಾಗಾಗಿ ಸರ್ಕಾರ ಜನರಿಗೆ ಸಹಾಯ ಮಾಡಬೇಕು. ಅದು ಲಾಠಿ ಚಾರ್ಜ್ ಅಥವಾ ನಿಮ್ಮ ಭಾಷಣದ ಮೂಲಕವಲ್ಲ, ಹೊರತಾಗಿ ರೇಷನ್ ಮತ್ತು ಹಣದ ರೂಪದಲ್ಲಿ ಸಹಕಾರ ನೀಡಿ ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ, ಕಪಿಲ್ ಸಿಬಲ್ ಅವರು ‘ಗುರುದ್ವಾರ, ಮಂದಿರ, ಎನ್ ಜಿಒ ಮುಖಾಂತರ ವಲಸಿಗರು ಹಾಗೂ ಬಡ ಜನರಿಗೆ ಸಹಾಯ ಮಾಡಿದ ಜನರಿಗೆ ಸೆಲ್ಯೂಟ್ ಮಾಡುತ್ತೇನೆ’ ಎಂದಿದ್ದಾರೆ.








