’’ತಕ್ಷಣವೇ ಉಕ್ರೇನ್ ತೊರೆಯಿರಿ “ ಭಾರತೀಯ ರಾಯಭಾರಿ ಕಚೇರಿಯಿಂದೆ ಎಚ್ಚರಿಕೆ…..
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ನಿರಂತರವಾಗಿ ಮುಂದುವರೆದೆ ಬೆನ್ನಲ್ಲೇ, ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಂಗಳವಾರ ಹೊಸ ಸಲಹೆಯೊಂದನ್ನ ನೀಡಿದೆ. ಎಲ್ಲಾ ಭಾರತೀಯ ನಾಗರಿಕರು ತಕ್ಷಣವೇ ದೇಶವನ್ನು ತೊರೆಯುವಂತೆ ಕೇಳಿಕೊಳ್ಳಲಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಹಗೆತನದ ದೃಷ್ಟಿಯಿಂದ ರಾಯಭಾರ ಕಚೇರಿ ಈ ಸಲಹೆಯನ್ನು ನೀಡಿದೆ. ಉಕ್ರೇನ್ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟ ನಂತರ ಇದೇ ರೀತಿಯ ಸಲಹೆಯನ್ನು ನೀಡಲಾಯಿತು. ರಾಯಭಾರ ಕಚೇರಿಯು ಒಂದು ವಾರದೊಳಗೆ ಈ ಎರಡನೇ ಸಲ ಎಚ್ಚರಿಕೆಯನ್ನ ನೀಡಿದೆ.
” ಉಕ್ರೇನ್ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಲಭ್ಯವಿರುವ ಮಾರ್ಗಗಳ ಮೂಲಕ ತಕ್ಷಣವೇ ಉಕ್ರೇನ್ ತೊರೆಯುವಂತೆ ಸೂಚಿಸಲಾಗಿದೆ” ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ. ದೇಶವನ್ನು ತೊರೆಯಲು ಉಕ್ರೇನಿಯನ್ ಗಡಿಗೆ ಪ್ರಯಾಣಿಸಲು ಯಾವುದೇ ಮಾರ್ಗದರ್ಶನ ಅಥವಾ ಸಹಾಯಕ್ಕಾಗಿ ಭಾರತೀಯ ಪ್ರಜೆಗಳನ್ನು ಸಂಪರ್ಕಿಸಲು ರಾಯಭಾರ ಕಚೇರಿ ಕೇಳಿದೆ.
Leave Ukraine as soon as possible, Indian Embassy issued new advisory amid Russian attacks