Legends League Cricket Season 2 : ಕ್ಯಾಪ್ಟನ್ ಗಳಾದ ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್
ಸೆಪ್ಟೆಂಬರ್16 ರಿಂದ ಆರಂಭವಾಗಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ನ ಎರಡನೇ ಆವೃತ್ತಿಗೆ ನಾಯಕರ ಆಯ್ಕೆ ಪ್ರಕ್ರಿಯೆ ಮುಗಿದಿದೆ.
ಈ ಋತುವಿನಲ್ಲಿ ಭಾಗವಹಿಸಲಿರುವ ನಾಲ್ಕು ತಂಡಗಳು ತಮ್ಮ ನಾಯಕರನ್ನು ಘೋಷಿಸಿವೆ.
ಮೊದಲು ಇಂಡಿಯಾ ಕ್ಯಾಪಿಟಲ್ಸ್ (ಗೌತಮ್ ಗಂಭೀರ್) ತಂಡ, ನಂತರ ಗುಜರಾತ್ ಜೈಂಟ್ಸ್ (ವೀರೇಂದ್ರ ಸೆಹ್ವಾಗ್) ತಂಡ ತಮ್ಮ ನಾಯಕರ ಹೆಸರುಗಳನ್ನು ಘೋಷಿಸಿತು.
ಇತ್ತೀಚಿನ ಮಣಿಪಾಲ್ ಟೈಗರ್ಸ್ ಮತ್ತು ಬಿಲ್ವಾರಾ ಕಿಂಗ್ಸ್ ಫ್ರಾಂಚೈಸಿಗಳು ತಮ್ಮ ನಾಯಕರ ಹೆಸರನ್ನು ಘೋಷಿಸಿವೆ.
ಮಣಿಪಾಲ್ ಗ್ರೂಪ್ ಒಡೆತನದ ಮಣಿಪಾಲ್ ಟೈಗರ್ಸ್, ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಮತ್ತು ಪ್ರಸ್ತುತ ರಾಜ್ಯಸಭಾ ಸಂಸದ ಹರ್ಭಜನ್ ಸಿಂಗ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.
ಎಲ್ ಎನ್ ಜೆ ಬಿಲ್ವಾರಾ ಗ್ರೂಪ್ ಮಾಲೀಕತ್ವದ ಬಿಲ್ವಾರಾ ಕಿಂಗ್ಸ್ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾನ್ ಅವರನ್ನು ತಮ್ಮ ತಂಡದ ನಾಯಕರನ್ನಾಗಿ ಘೋಷಣೆ ಮಾಡಿದೆ.
ತಮ್ಮನ್ನ ನಾಯಕರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಹರ್ಭಜನ್ ಸಿಂಗ್, ಇರ್ಫಾನ್ ಖುಷಿ ವ್ಯಕ್ತಪಡಿಸಿದ್ದು, ತಮ್ಮನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದಕ್ಕೆ ನ್ಯಾಯ ಒದಗಿಸುತ್ತೇವೆ ಎಂದಿದ್ದಾರೆ.
ಲೀಗ್‌ನ ಅಂಗವಾಗಿ ಒಟ್ಟು 16 ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯ ಉದ್ಘಾಟನಾ ಪಂದ್ಯವು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ನಡೆಯಲಿದೆ.
ಈ ಪಂದ್ಯ ಭಾರತ ಮಹಾರಾಜಸ್ ಮತ್ತು ವಿಶ್ವ ಜೈಂಟ್ಸ್ ನಡುವೆ ನಡೆಯಲಿದೆ. ಬಿಸಿಸಿಐ ಮುಖ್ಯಸ್ಥ ಗಂಗೂಲಿ ಭಾರತ ಮಹಾರಾಜರನ್ನು ಮುನ್ನಡೆಸಿದರೆ, ಇಯಾನ್ ಮಾರ್ಗನ್ ವಿಶ್ವ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.