ಕೊರೊನಾಗೆ ನಿಂಬೆ ರಸ ರಾಮಬಾಣ : ಮೂಗಿಗೆ ನಿಂಬೆ ರಸ ಹಾಕಿಸಿಕೊಂಡರೇ ಕೊರೊನಾ ಬರಲ್ವಾ..?
ಧಾರವಾಡ : ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಕೊರೊನಾ ಹೆಮ್ಮಾರಿಗೆ ನಿಂಬೆ ರಸ ರಾಮಬಾಣವಾ..? ಮೂಗಿಗೆ ನಿಂಬೆ ರಸ ಹಾಕಿಸಿಕೊಂಡರೇ ಕೊರೊನಾ ಬರಲ್ವಾ..? ಸದ್ಯ ಪ್ರಶ್ನೆಗಳು ಹುಟ್ಟಲು ಕಾರಣ ಧಾರವಾಡದ ಕುರುಬಗಟ್ಟಿ ಗ್ರಾಮದಲ್ಲಿ ನಡೆದ ಒಂದು ಮದುವೆ.
ಅರ್ರೆ ಮದುವೆಗೂ ಕೊರೊನಾಗೂ ನಿಂಬೆ ರಸಕ್ಕೂ ಏನು ಸಂಬಂಧ ಅಂತೀರಾ ಅಲ್ಲೆ ಇರೋದು ಕಹಾನಿ ಮೇ ಟ್ವಿಸ್ಟ್. ಮೊನ್ನೆ ಧಾರವಾಡದ ಉದ್ಯಮಿಯೊಬ್ಬರು ಕೊರೊನಾ ಹರಡದಂತೆ ನೋಡಿಕೊಳ್ಳಲು ಮೂಗಿನಲ್ಲಿ ನಿಂಬೆ ರಸ ಹಾಕಬೇಕು ಎಂದು ಹೇಳಿದ್ದರು. ಮೂಗಿನಲ್ಲಿ ನಿಂಬೆ ರಸ ಹಾಕಿಸಿಕೊಂಡರೇ ಕಫ, ನೆಗಡಿ, ಕೆಮ್ಮು ಬರುವುದಿಲ್ಲ ಎಂದು ನುಡಿದಿದ್ದರು. ಇದನ್ನ ಗಂಭೀರವಾಗಿ ತಿಳಿದ ಕುರುಬಗಟ್ಟಿ ಗ್ರಾಮಸ್ಥರು ಕೊರೊನಾ ಹರಡಬಾರದು ಎಂಬ ಉದ್ದೇಶದಿಂದ ಮದುವೆ ಮನೆಗೆ ಬಂದವರ ಮೂಗಿಗೆ ಲಿಂಬೆ ರಸ ಹಾಕಿದ್ದಾರೆ.
ಹೌದು.. ಪರಮೇಶ್ವರ ಕಾಟಗೇರ ಜೊತೆ ಕರೆವ್ವಾ, ಆತ್ಮಾನಂದ ಕಾಟಗೇರ ಜೊತೆ ಲಕ್ಷ್ಮಿ ಹಾಗೂ ಯಲ್ಲಪ್ಪ ಮುರಕಟ್ಟಿ ಜೊತೆ ಲಕ್ಷ್ಮಿ ಎಂಬುವವರ ವಿವಾಹ ನಿನ್ನೆ ನಡೆದಿತ್ತು. ಆ ಸಂದರ್ಭದಲ್ಲಿ ಮದುವೆಗೆ ಆಗಮಿಸಿದವರ ಮೂಗಿಗೆ ಲಿಂಬೆ ರಸ ಹಾಕಲಾಗಿದೆ. ಸದ್ಯ ಈ ವಿಚಾರದಲ್ಲಿ ಭಾರಿ ಸದ್ದು ಮಾಡುತ್ತಿದೆ.










