ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆಗಳ ಮನೆ ನಡೆದಿರುವ ಸಿಬಿಐ ದಾಳಿ ಪ್ರಕರಣದಲ್ಲಿ ತನಿಖೆಗೆ ಒಳಗಾಗಿ ಸೀತೆಯಂತೆ ಹೊರಬರಲಿ ಎನ್ನು ಮೂಲಕ ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಡಿಕೆಶಿ ಮೇಲೆ ಹಿಂದೆ ಸಹ ದಾಳಿ ಆಗಿದೆ, ಇದು ಹೊಸದಲ್ಲ. ಡಿಕೆಶಿ ಬಳಿ ಹವಾಲಾ ಹಣ ಸಿಕ್ಕಿರುವ ಬಗ್ಗೆ ಹಿಂದಿನ ದಾಳಿಯಲ್ಲಿ ಗೊತ್ತಾಗಿತ್ತು. ಹೀಗಾಗಿ ತನಿಖೆ ಸಹ ಆಗ್ತಿದೆ ಎಂದಿದ್ದಾರೆ.
ಇವತ್ತಿನ ಸಿಬಿಐ ದಾಳಿ ರಾಜಕೀಯ ಉದ್ದೇಶದಿಂದ ಕೂಡಿಲ್ಲ. ಇಂತಹ ಆರೋಪ ಮಾಡುವ ಕಾಂಗ್ರೆಸ್ ನಾಯಕರ ಹೇಳಿಕೆ ಕಂಡು ಆಶ್ಚರ್ಯ ಆಯ್ತು. ಹಿಂದೆ ಬಿ.ಎಸ್ ಯಡಿಯೂರಪ್ಪ ಮೇಲೂ ಸಹ ದಾಳಿ ಆಗಿತ್ತು. ಆಗ ಕಾಂಗ್ರೆಸ್ ನಾಯಕರು ಎನೆಂದು ಹೇಳಿಕೆ ಕೊಟ್ಟಿದ್ದರು. ಉಪ್ಪು ತಿಂದೋನೋ ನೀರು ಕುಡಿಯಲೇಬೇಕು ಅಂತ ಹೇಳಿದ್ದರು.
ಕಾಂಗ್ರೆಸ್‍ಗೊಂದು ಕಾನೂನು ಬೇರೆ ಇದೆಯಾ..? ಡಿಕೆಶಿ ತನಿಖೆಗೆ ಒಳಗಾಗಲಿ. ಸೀತೆಯಂತೆ ಹೊರಗೆ ಬರಲಿ ಎಂದು ಟಾಂಗ್ ನೀಡಿದ್ದಾರೆ.