ದಾವಣಗೆರೆ: ಬೇರೆ ಯಾರಿಗೋ ಒಬ್ಬರಿಗೆ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವ ನೀವೇ ಮಂತ್ರ ಸ್ಥಾನ ತ್ಯಾಗ ಮಾಡಿ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ , ಸಚಿವ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಕೆಲ ಸಚಿವರು ಕೆಲವರಿಗಾಗಿ ಸಚಿವ ಸ್ಥಾನ ಕೊಡಿಸಲು ಹೋರಾಟ ಮಾಡುತ್ತಿದ್ದಾರೆ. ಯಾರು ಲಾಬಿ ಮಾಡುತ್ತಿದ್ದಾರೋ ಅವರು ತಮ್ಮ ಸಚಿವ ಸ್ಥಾನವನ್ನೇ ಬಿಟ್ಟುಕೊಡಲಿ. ಸಿ.ಪಿ. ಯೋಗೇಶ್ವರ್ ಚುನಾವಣೆಯಲ್ಲಿ ಗೆದ್ದುಬಂದು ಸಚಿವ ಸ್ಥಾನ ಕೇಳಲಿ. ನಾವು ಹಲವು ಬಾರಿ ಜನರಿಂದ ಗೆದ್ದು ಶಾಸಕರಾಗಿದ್ದೇವೆ ಎಂದು ಮತ್ತೆ ಸೋತವರು ಕಾರ್ಡ್ ಪ್ರಯೋಗಿಸಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರದ ವರಿಷ್ಠರು ಹಾಗೂ ಸಿಎಂ ಯಡಿಯೂರಪ್ಪ ಚರ್ಚೆ ಮಾಡುತ್ತಾರೆ. ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವಿದೆ ಎಂಬಂತೆ ಮಾಧ್ಯಮದಲ್ಲಿ ಬಿತ್ತರಿಸುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದರು.
ಶಾಸಕರ ಭಾವನೆಯನ್ನ ಸಿಎಂ ಹಾಗೂ ರಾಜ್ಯದ ಅಧ್ಯಕ್ಷರ ಜೊತೆ ಚರ್ಚೆ ಮಾಡಿದ್ದೇವೆ. ಯಾರೂ ಪಕ್ಷದಲ್ಲಿ ಭಿನ್ನಮತ ಹುಟ್ಟು ಹಾಕುವಂತಹ ಮಾತುಗಳನ್ನಾಡಿಲ್ಲ. ಯಾರೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪನವರ ಬದಲಾವಣೆ ಕೇವಲ ಭ್ರಮೆ. ರಾಜ್ಯಾಧ್ಯಕ್ಷರು ಆಗಲಿ ಕೇಂದ್ರದ ವರಿಷ್ಠರು ಯಾರೂ ಸಿಎಂ ಬದಲಾವಣೆ ಎಂದು ಎಲ್ಲೂ ಹೇಳಿಲ್ಲ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel