ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ, ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮೋಕ್ರಸಿಯನ್ನು ಉಳಿಸಲಿ Siddaramaiah saaksha tv
ಬೆಂಗಳೂರು : ಹಾಲಿನ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಸಿಎಂ ಆಗಲಿ. ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮೋಕ್ರಸಿಯನ್ನು ಸಿದ್ದರಾಮಯ್ಯ ಉಳಿಸಲಿ ಎಂದು ಸಂಗೀತ ನಿರ್ದೇಶಕ ಹಂಸಲೇಖ ಆಶಿಸಿದ್ದಾರೆ.
ಬೆಂಗಳೂರು ನಗರದ ಗಾಂಧಿಭವನದಲ್ಲಿ ಇಂದು ಸಾಹಿತಿ.ಎಸ್.ಜಿ.ಸಿದ್ದರಾಮಯ್ಯ ಆತ್ಮಕಥೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಹಂಸಲೇಖ, ಮೊದಲ ಬಾರಿ ನಾನು ಬರೆದುಕೊಂಡು ಭಾಷಣ ಮಾಡ್ತಿದ್ದೇನೆ. ನುಡಿದರೆ ಮುತ್ತಿನ ಹಾರದಂತಿರಬೇಕು ಅಂತ ಮಾತಾಡ್ತೇವೆ. ಆದರೆ ಒಳಗಡೆಯಿಂದ ಅದು ಸ್ಪಟಿಕದ ಸಲಾಖೆಯಂತೆ ಇರುತ್ತೆ ನಮ್ಮ ಮಾತು. ಬರೆದುಕೊಳ್ಳದೆ ಆಗುವ ಅಪಾಯ ತಡೆಯಲು ಇಲ್ಲಿ ಬರೆದು ಕೊಂಡು ಬಂದು ಮಾತಾಡ್ತಿದ್ದೇನೆ ಎಂದು ಹೇಳುವ ಮೂಲಕ ಈ ಹಿಂದೆ ಆಗಿದ್ದ ವಿವಾದವನ್ನು ನೆನೆಸಿಕೊಂಡರು.
ಇದೇ ವೇಳೆ ಇತ್ತೀಚಿಗೆ ನಡೆದ ವಿವಾದದ ಬಗ್ಗೆ ಮಾತನಾಡಿದ ಹಂಸಲೇಖ, ಇತ್ತೀಚಿಗೆ ಒಂದು ವಿವಾದ ಆಗಿ ನನಗೆ ಗೊತ್ತಿಲ್ಲದ ಸಮುದಾಯಗಳೆಲ್ಲ ನನ್ನ ಜೊತೆಗೆ ನಿಂತರು, ಹೀಗೆಲ್ಲ ಆಗತ್ತೆ ಅಂತ ನನಗೆ ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತವರು ಎಸ್.ಜಿ ಸಿದ್ದರಾಮಯ್ಯ ಎಂದು ಸ್ಮರಿಸಿದರು.
ಇನ್ನು ಮುಂದುವರೆದು ಮಾತನಾಡಿ ಹಾಲಿನ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಸಿಎಂ ಆಗಲಿ. ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮೋಕ್ರಸಿಯನ್ನು ಸಿದ್ದರಾಮಯ್ಯ ಉಳಿಸಲಿ ಎಂದು ಹಂಸಲೇಖ ಆಶಿಸಿದರು.