ರಾಯಚೂರು: ರಾಜ್ಯದಲ್ಲಿ ದೇವಾಲಯ, ಮಠ, ಧಾರ್ಮಿಕ ಕೇಂದ್ರಗಳನ್ನು ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು ಎಂದು ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಹಿಂದೆ ದೇವಸ್ಥಾನ, ಮಠಗಳ ಆಯಾ ಶಿಷ್ಯರು, ಭಕ್ತರ, ಸಮುದಾಯ ಮುಖಂಡರ ನೇತೃತ್ವದಲ್ಲಿ ನಿರ್ವಹಣೆ, ಕಾರ್ಯಚಟುವಟಿಕೆ ನಡೆಯುತ್ತಿದ್ದವು. ಆದರೆ, ಈಗ ಸರ್ಕಾರದ ವಶಕ್ಕೆ ಬಂದಿವೆ. ಸರ್ಕಾರದ ರಾಜಕೀಯ ಹಿನ್ನೆಲೆಯಲ್ಲಿ ತಿರುಪತಿ ಲಡ್ಡುವಿನ ಪ್ರಕರಣದಂತ ತೊಂದರೆಗಳು ಆಗುತ್ತಿವೆ. ದೇವರಿಗೆ ದನದ ಕೊಬ್ಬಿರುವ ಪ್ರಸಾದ ನೈವೇದ್ಯ ಹಿಡಿದಿರುವುದು ಅಕ್ಷಮ್ಯ ಅಪರಾಧ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಯಾ ಪ್ರಾಂತದ ಮಠ, ದೇವಾಲಯಗಳು ಅಲ್ಲಿನ ಜನರ ನೇತೃತ್ವದಲ್ಲಿ ನಡೆಯಬೇಕು. ಇದಕ್ಕೆ ಸನಾತನ ಧರ್ಮ ಪರಿರಕ್ಷಣ ಕುರಿತು ಯೋಜನೆಯನ್ನು ನಾವು ಕೂಡ ಬೆಂಬಲಿಸುತ್ತೇವೆ. ನಮ್ಮ ಊರಿನ ಆಚಾರ-ಸಂಪ್ರದಾಯ ಬಗ್ಗೆ ಬೇರೆ ಯಾರೋ ಬಂದು ಹೇಳುವುದಲ್ಲಾ. ನಮ್ಮ ಊರಿನ ಹಿರಿಯರು, ಸಮುದಾಯದ ಹಿರಿಯರು, ವಿದ್ವಾಂಸರು, ಮಠಾಧೀಶರ ನೇತೃತ್ವದಲ್ಲಿ ನಡೆಯಬೇಕು ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.