ಖಾನ್ ಗಳು ಈಗ ದೇಶ ಬಿಡಲಿ : ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ : ದೇಶ ಸುರಕ್ಷಿತ ಅಲ್ಲ ಎಂದ ಖಾನ್ ಗಳು ಈಗ ದೇಶ ಬಿಡಲಿ. ಅವರ ಮಕ್ಕಳೆಲ್ಲ ನೇರವಾಗಿ ಅಫ್ಘಾನಿಸ್ತಾನಕ್ಕೆ ಹೋಗಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಡ್ರಗ್ ಕೇಸ್ ನಲ್ಲಿ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಅರೆಸ್ಟ್ ಆಗಿದ್ದು, ಈ ಬಗ್ಗೆ ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಸಿಲುಕಿದ್ದ ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿ ಮಕ್ಕಳು, ಸಿನಿಮಾ ನಟರು ಇದ್ದಾರೆ. ದುರ್ದೈವ ಎಂದರೆ ಪ್ರಕರಣ ಮುಚ್ಚಿ ಹಾಕಲು ಒಂದು ಹಂತದವರೆಗೆ ಮಾತ್ರ ತನಿಖೆ ನಡೆಸಲಾಯಿತು ಎಂದು ಆರೋಪಿಸಿದರು.
ಇದೇ ವೇಳೆ ದೇಶ ಸುರಕ್ಷಿತ ಅಲ್ಲ ಎಂದ ಖಾನ್ ಗಳು ಈಗ ದೇಶ ಬಿಡಲಿ ಎಂದ ಯತ್ನಾಳ್, ಅವರ ಮಕ್ಕಳೆಲ್ಲ ನೇರವಾಗಿ ಅಫ್ಘಾನಿಸ್ತಾನಕ್ಕೆ ಹೋಗಲಿ. ಸುರಕ್ಷಿತವಾಗಿ ತಾಲಿಬಾನ್ ಕೆಳಗೆ ನಟನೆ ಮಾಡಿಕೊಂಡಲು ಇರಲಿ. ದೇಶದಲ್ಲಿ ಹಿಂದೂಗಳು ಸಿನಿಮಾ ನೋಡ್ತಾರೆ, ಇವರು ಸಾವಿರಾರು ಕೋಟಿ ಗಳಿಕೆ ಮಾಡ್ತಾರೆ. ಅವರ ಮಕ್ಕಳೆಲ್ಲ ಹೀಗೆ ಮಜಾ ಮಾಡಿಕೊಂಡು ದೇಶದ ವ್ಯವಸ್ಥೆ ಕೆಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.








