‘ಗಾರ್ಬೇಜ್ ಸಿಟಿ’ ‘ಗಾರ್ಡನ್ ಸಿಟಿ’ ಮಾಡಲು ಹೊರಟಿರುವ LBTC..! ಯುವಕರಿಗೆ ಸ್ಪೂರ್ತಿ..!
ನಮ್ಮ ಮನೆಯನ್ನ ನಾವೇ ಸ್ವಚ್ಛವಾಗಿಟ್ಟುಕೊಳ್ಬೇಕು. ನಮ್ಮ ನಗರವನ್ನ ನಾವೇ ಶುದ್ಧವಾಗಿಡಬೇಕು ಅನ್ನೋ ಒಂದು ಒಳ್ಳೇ ಥೇಮ್, ಉಳ್ಳೆ ಉದ್ದೇಶ ಇಟ್ಕೊಂಡು LBTC NGO ಸಂಸ್ಥೆ ಕೆಲಸ ಮಾಡ್ತಿದೆ. ಲೆಟ್ಸ್ ಬಿ ದ ಚೇಂಜ್ ಅನ್ನೋ ಎನ್ ಜಿ ಒ ಸಂಸ್ಥೆ ಸಿಲಿಒಕಾನ್ ಸಿಟಿಯನ್ನ ಗಾರ್ಡನ್ ಸಿಟಿ ಮಾಡೋ ಕನಸು ಹೊತ್ತಿದೆ.
ಅದರಂತೆ ಕೆಲ ಜಾಗಗಳನ್ನ ಆಯ್ದು ಅಂತಹ ಜಾಗಗಳಲ್ಲಿ ಶುಚಿ ಗೊಳಿಸಿ ವಾಲ್ ಪೇಯಿಂಟ್ ಮಾಡಿ ಜನರ ಗಮನ ಸೆಳೆಯುತ್ತಿದ್ದಾರೆ. ಅದ್ರಲ್ಲೂ ಇಂತಹ ಕೆಲಸದಲ್ಲಿ ಈ ಸಂಸ್ಥೆಗೆ ಸಾಥ್ ನೀಡುತ್ತಿರುವವರು ಯುವಕರೇ ಅನ್ನೋದು ಸಂತಸದ ವಿಚಾರವಾಗಿದೆ.
ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ್ದು ನಟ ದೀಪು ಸಿಧು : ಬಿಜೆಪಿ ಜೊತೆ ನಂಟಿನ ಸಾಕ್ಷ್ಯ
ಇತ್ತೀಚೆಗೆ ನಾಗರಬಾವಿಯ ಬಳಿಯೂ ಈ ಸಂಸ್ಥೆವತಿಯಿಂದ ಅನೇಕ ಯುವಕರು ಸ್ವಯಂ ಪ್ರೇರಿತರಾಗಿ ಜೊತೆಗೂಡಿ ವಾಲ್ ಪೇಯಿಂಟ್ ಮಾಡಿದ್ದಾರೆ. ಕೊರೊನಾ ಹಾವಳಿ ನಡುವೆ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಥ್ಯಾಕ್ಸ್ ಹೇಳುವ ಥೀಮ್ ಇದಾಗಿದ್ದು, ಈ ಯುವಕರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel