ಬೆಂಗಳೂರು : ಇಂದು ನಾಗರಪಂಚಮಿ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ, ನಾಡಿನ ಜನರಿಗೆ ಅಣ್ಣತಂಗಿ ಬಾಂಧವ್ಯದ, ಪ್ರಕೃತಿ-ಮನುಷ್ಯನ ನಡುವಿನ ಸಂಬಂಧದ ಪ್ರತೀಕವಾದ ನಾಗರಪಂಚಮಿ ಹಬ್ಬದ ಶುಭಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾ ಬಾಧಿಸುತ್ತಿರುವ ಇಂತಹ ದುರಿತ ಕಾಲದಲ್ಲಿ ಹಬ್ಬದ ಆಚರಣೆಯಲ್ಲಿ ಭಕ್ತಿಯೇ ಪ್ರಧಾನವಾಗಲಿ.ದಾನ ಧರ್ಮದಲ್ಲಿ ಹಬ್ಬದ ಸಂಭ್ರಮವನ್ನು ಕಾಣೋಣ. ಇತರರಿಗೆ ನೆರವಾಗೋಣ, ಹಬ್ಬದ ಸಂಭ್ರಮವನ್ನು ಇನ್ನಷ್ಟು ಅರ್ಥಪೂರ್ಣವಾಗಿಸೋಣ. ತಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದಾರೆ. 








