ಪತ್ರ ಚಳುವಳಿ : ಸಿಎಂ ಕಚೇರಿಗೆ ಬಂದ ಪತ್ರಗಳನ್ನ ನೋಡಿ ದಂಗಾದ ಅಧಿಕಾರಿಗಳು..!
ಸಿಗರೇಟ್ ತಂಬಾಕು ಉತ್ಪನ್ನ ಮಾರಾಟ ಮಾಡುವ ಸ್ಥಳಗಳ ನಿಯಂತ್ರಣ ಕಾಯ್ದೆ ವಿರೋಧಿಸಿ, ಅಂಗಡಿ ಮುಂಗಟ್ಟು ಮಾಲೀಕರು ಪತ್ರ ಚಳುವಳಿ ಶುರುಮಾಡಿದ್ದಾರೆ. ಸುಮಾರು 5 ಸಾವಿರಕ್ಕೂ ಹೆಚ್ಚು ಅಂಗಡಿ ಮಾಲೀಕರು 15 ಸಾವಿರಕ್ಕೂ ಅಧಿಕ ಪತ್ರಗಳನ್ನ ಬರೆದಿದ್ದಾರೆ. ಸಿಎಂ ಯಡಿಯೂರಪ್ಪ, ಭೈರತಿ ಬಸವರಾಜ್, ಡಾ. ಕೆ ಸುಧಾಕರ್ ಸೇರಿ ಅಧಿಕಾರಿಗಳಿಗೆ ಏಕಕಾಲಕ್ಕೆ ಬಂದಿರುವ ಪತ್ರಗಳ ರಾಶಿ ಕಂಡು ಸಚಿವಾಲಯದ ಸಿಬ್ಬಂದಿ ಗಾಬರಿಯಾಗಿದ್ದಾರೆ. ಅಲ್ಲದೇ ಸಚಿವರ ಕಚೇರಿಗಳಿಗೆ ಕರೆ ಮಾಡಿ ಟಪಾಲ್ ಗಳನ್ನ ಕೊಂಡೊಯ್ಯುವಂತೆ ಮನವಿ ಮಾಡಿದ್ದಾರೆ. ಸಿಎಂ ಕಚೇರಿಗೇನೆ ಬರೊಬ್ಬರಿ 5000 ಪತ್ರಗಳು ಬಂದಿವೆಯಂತೆ. ಒಂದೇ ಕವರ್, ಒಂದೇ ವಿಷಯ ಹೊಂದಿರುವ ಸಾವಿರಾರು ಪತ್ರಗಳು ಇವಾಗಿವೆ. ಇನ್ನೂ ಭ್ರಷ್ಟ ಅಧಿಕಾರಿಗಳು ಬೆಂಗಳೂರಿನ ಅಂಗಡಿ ಮುಂಗಟ್ಟುಗಳಿಗೆ ದೌರ್ಜನ್ಯ ಮಾಡ್ತಿದ್ದಾರೆ. ತಂಬಾಕು ಸಿಗರೇಟ್ ನಿಷೇಧದ ಹೆಸರಲ್ಲಿ ದೌರ್ಜನ್ಯ ಎಸಗಿ ಹಣ ವಸೂಲಿ ಮಾಡ್ತಿದ್ದಾರೆ ಎಂದು ಆರೋಪಿಸಿ, ಇದನ್ನು ನಿಯಂತ್ರಿಸುವಂತೆ ಆಗ್ರಹಿಸಿ ಪತ್ರ ಚಳುವಳಿ ಶುರು ಮಾಡಿದ್ದಾರೆ.
ಈತ ವೈದ್ಯನೋ ಅನಾಗರಿಕನೋ… ಟಾರ್ಚರ್ ಸಹಿಸೋಗದೇ ಕಣ್ಣೀರು ಹಾಕ್ತಿದ್ದಾರಂತೆ ಮಹಿಳಾ ಸಿಬ್ಬಂದಿ..!
ರಾಜ್ಯಕ್ಕೆ ಬರಬೇಕಿರೋ ಜಿಎಸ್ ಟಿ ಹಣದಲ್ಲಿ 1500 ಕೋಟಿ ಕಡಿತವಾಗಬಹುದು
ಬಡ ಮಹಿಳೆಯಿಂದ 15 ಸಾವಿರ ರೂ ಡಿಸೇಲ್ ಹಾಕಿಸಿಕೊಂಡ ಯುಪಿ ಪೊಲೀಸರು
VIDEO : ‘ಪ್ರೀತಿಯ ಸಾಗರ’ : ಸಮುದ್ರದ 60 ಅಡಿ ಆಳದಲ್ಲಿ ‘ನೀರಿನೊಳಗೆ’ ಮದುವೆಯಾದ ಪ್ರೇಮಿಗಳು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel