ಡೈಲಿಹಂಟ್‌ನ ಬ್ಲಾಗರ್, ಇನ್ಸ್ಟಾಗ್ರಾಂ ನಲ್ಲಿ ಫುಡ್ ವ್ಲಾಗರ್ ಕುನಾಲ್ ಬೈಸಾನಿ
ಮನಸಿದ್ದರೆ ಮಾರ್ಗ ಎಂದು ಬಸವಣ್ಣನವರು ಹೇಳಿದಂತೆ ನಮಗೆ ಕೆಲಸ ಮಾಡುವ ಮನಸ್ಸು ಇದ್ದರೆ ಮಾರ್ಗ ಹಲವಾರು ಸಿಗುತ್ತದೆ ಎನ್ನುವುದಕ್ಕೆ ಫುಡ್ ಬ್ಲಾಗರ್ ಆಗಿ ಮಿಂಚುತ್ತಿರುವ ಕುನಾಲ್ ಬೈಸಾನಿ ಅಲಿಯಾಸ್ ಕುನಲ್
ಅವರ ಬದುಕಿನ ಪಯಣವೇ ಉತ್ತಮ ಉದಾಹರಣೆ.
ಮೂಲತಃ ಆಂಧ್ರಪ್ರದೇಶದವರಾದರೂ, ಅಪ್ಪಟ ಕನ್ನಡಿಗನಂತೆ ಮಾತನಾಡುವ ಶ್ರೀನಿವಾಸುಲು ಹಾಗೂ ಕಾಂತ್ ನಾಗಲಕ್ಷ್ಮಿ ದಂಪತಿಯ ಪುತ್ರ. ಬೆಂಗಳೂರಿನ ದಯಾನಂದ ಸಾಗರ್ ಅಕಾಡೆಮಿ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳಿಸಿದ ಇವರು, ಬೆಂಗಳೂರಿನ ಆರ್. ವಿ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ನಲ್ಲಿ ಪಿಜಿಡಿಎಂ ಅನ್ನು ಪೂರೈಸಿದರು. ಅವರ ಲೈಫ್ ಜರ್ನಿ ಹೇಗಿತ್ತು, ಏನೆಲ್ಲಾ ತಿರುವು ಪಡೆಯಿತು ಅನ್ನೋದನ್ನು ಅವರ ಮಾತುಗಳಲ್ಲೇ ನೋಡೋಣ :
ನಮಗೆ ಇಷ್ಟವಾದ ಕೆಲಸವನ್ನು ನಾವು ಯಾವತ್ತೂ ಬಿಟ್ಟುಕೊಡಬಾರದು. ನಾನು ಜೀವನೋಪಾಯಕ್ಕಾಗಿ ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರೂ, ಸಮಯ ಸಿಕ್ಕಾಗಲೆಲ್ಲಾ ಫುಡ್ ವ್ಲಾಗ್ ಗಳನ್ನು ಮಾಡುತ್ತಿದ್ದೆ. ಮೊದಲು ಬ್ಲಾಗರ್ ಆಗಿ ನನ್ನ ಈ ಜರ್ನಿ ಆರಂಭವಾಯಿತು, ನಂತರದಲ್ಲಿ ಕನ್ನಡದಲ್ಲಿ ಫುಡ್ ವ್ಲಾಗ್‌ಗೆ ವಾಯ್ಸ್ ಓವರ್ ನೀಡುವ ಮೂಲಕ ಹೆಚ್ಚಿನ ಜನರಿಗೆ ಪರಿಚಯವಾಗಲು ಸಾಧ್ಯವಾಯಿತು. ಮುಂಚೆ ಟಿಕ್ ಟಾಕ್ ಇತ್ತು, ಈಗ ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್. ರೀಲ್ಸ್‌ಗಳನ್ನು ಹೆಚ್ಚಾಗಿ ಮನೋರಂಜನೆ ಸ್ವಲ್ಪ ಜನ ಜನರ ಮನೋರಂಜನೆಗಾಗಿ ಮಾಡುತ್ತಿದ್ದರೆ ಇನ್ನು ಕೆಲವು ಜನ ತಾವು ಪ್ರಸಿದ್ಧರಾಗಬೇಕೆಂದು ಮಾಡುತ್ತಾರೆ. ಆದರೆ ಬೆರಳೆಣಿಕೆಯಷ್ಟು ಜನ ಮಾತ್ರ ಜನರಿಗೆ ಉಪಯುಕ್ತವಾಗುವ ಮಾಹಿತಿ ನೀಡಿ ಆ ಮೂಲಕ ಜನರ ಮನಸ್ಸನ್ನು ಗೆಲ್ಲುತ್ತಾರೆ. ನನಗೂ ಜನರಿಗೆ ಮಾಹಿತಿ ನೀಡುವ ಆಸೆ, ಇರಾದೆ. ಹಾಗಾಗಿ ಸದ್ಯ ಫುಡ್ ವ್ಲಾಗ್‌ಗಳ ಮೂಲಕ ಹೊಸ ತಿಂಡಿ, ಖಾದ್ಯಗಳ ಪರಿಚಯ ನೀಡೋ ನನಗೆ ಜನರು ಘಟೋತ್ಕಜ ಎಂದೂ ಕರೆಯುತ್ತಾರೆ.
ಈಗ 90 ಸಾವಿರಕ್ಕೂ ಹೆಚ್ಚು ಹಿಂಬಾಲಕರು ಇದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿನಿತ್ಯ ಒಂದರಿಂದ ಎರಡು ರೀಲ್ಸ್ ಗಳನ್ನು ಮಾಡಿ, ಈ ಮೂಲಕ ಹೊಸ ಹೋಟೆಲ್ಗಳನ್ನು, ರುಚಿಯಾಗಿರೋ ತಿಂಡಿಗಳನ್ನು ಪರಿಚಯಿಸುತ್ತಾ, ಅಲ್ಲಿನ ಅಡುಗೆಯ ವಿಶೇಷತೆ ಮತ್ತು ಸ್ಥಳ ಬಗ್ಗೆಯೂ ಮಾಹಿತಿ ನೀಡುತ್ತೇನೆ.
ಇದರ ಜೊತೆಗೆ, ಡೈಲಿ ಹಂಟ್ ಆಪ್ ನಲ್ಲಿ, 1.7 ಮಿಲಿಯನ್ ಹಿಂಬಾಲಕರನ್ನು ಪಡೆದಿರುವ ನನ್ನ ಪ್ರೊಫೈಲ್‌ನಲ್ಲಿ ಹೋಗಿಬಂದ ಹೋಟೆಲ್ ಗಳ ವಿಶೇಷತೆ ಬಗ್ಗೆ ಇಂಗ್ಲಿಷ್ ಭಾಷೆಯಲ್ಲಿ ಬ್ಲಾಗ್ ಬರೆಯುತ್ತೇನೆ. ದಿನನಿತ್ಯ ರಿಲ್ಸ್ ಮಾಡುವುದು ಸ್ವಲ್ಪ ಕಷ್ಟವಾದರೂ, ಕೆಲವೊಮ್ಮೆ ಜನರ ಮನವಿ, ಇನ್ನು ಕೆಲವೊಮ್ಮೆ ಹೋಟೆಲ್ ಗಳಿಂದ ಆಹ್ವಾನ ಬಂದ ಆಹ್ವಾನದ ಮೇರೆಗೆ ರೀಲ್ಸ್ ಮಾಡುತ್ತೇನೆ. ಮಾಡೋ ಕೆಲಸದ ಬಗ್ಗೆ ಪ್ರೀತಿ ಮತ್ತು ಶ್ರದ್ಧೆ ಇರುವುದರಿಂದ ಕಷ್ಟವಾದರೂ, ಇಷ್ಟಪಟ್ಟು ಅದನ್ನು ಮಾಡುತ್ತೇನೆ. ಇದರಿಂದ ಜನರಿಗೆ ಸಹಾಯವಾಗುತ್ತದೆ ಎನ್ನುವುದೇ ಖುಷಿ.
ಇವುಗಳ ಜೊತೆಗೆ, ಕುನಾಲ್ ಅವರು ದೆಹಲಿ ಫುಡ್ ವಾಕ್ಸ್ ಮತ್ತು ಹ್ಮ್, ಎರಡೂ ಅಖಿಲ ಭಾರತ ಮಟ್ಟದ ಚಾನೆಲ್‌ಗಳಲ್ಲಿ ಬೆಂಗಳೂರಿನ ಖಾದ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಸ್ಮಾಲ್ ಬಿಸಿನೆಸ್ ಫುಡ್ ಗಳಿಗೆ ಬ್ರಾಂಡ್ ಅಂಬಾಸಿಡರ್ ಕುನಾಲ್ ಬೈಸಾನಿ
ನಿಮ್ಮ ಪ್ಯಾಷನ್ ಅನ್ನು ಫಾಲೋ ಮಾಡಿ. ಸುಮ್ಮನೆ ಹಾಗೆ ಫ್ರೀ ಫುಡ್ ಸಿಗುತ್ತೆ, ಹಣ ಸಿಗುತ್ತೆ ಎಂದು ಫುಡ್ ವ್ಲಾಗ್ ಅನ್ನು ಶುರು ಮಾಡಬೇಡಿ. ನಿಮ್ಮಲ್ಲಿ ಯಾವಾಗ ಆಸಕ್ತಿ ಇರುತ್ತದೆಯೋ ಆವಾಗ ಫುಡ್ ಬಗ್ಗೆ ಕಂಟೆಂಟ್ ಕ್ರಿಯೇಟ್ ಮಾಡಲು ಪ್ರಾರಂಭ ಮಾಡಿ. ನಂಬರ್ ಮತ್ತು ಎಂಗೇಜ್ಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಯಾವಾಗ ನಿಮ್ಮಲ್ಲಿ ಶ್ರದ್ಧೆ ಇರುತ್ತದೆಯೋ, ಆವಾಗ ನಿಮ್ಮ ಗುರಿಯತ್ತ ಪಯಣ ಸುಗಮವಾಗುತ್ತದೆ ಎನ್ನುತ್ತಾರೆ ಕುನಾಲ್ ಬೈಸಾನಿ
– ಆನಂದ ಜೇವೂರ್, ಕಲಬುರಗಿ