LIGER : ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸಿದ್ದೇನೆ – E D ವಿಚಾರಣೆ ನಂತರ ವಿಜಯ್ ದೇವರಕೊಂಡ ಮಾತು…
ಟಾಲಿವುಡ್ ನ ರೌಡಿ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಡೈರೆಕ್ಟರ್ ಪುರಿ ಜಗನ್ನಾಥ್ ಕಾಂಬಿನೇಷನ್ ನ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿದ್ದು, ಗೊತ್ತೆ ಇದೆ.
ಈ ಸಿನಿಮಾದಿಂದ ನಿಜವಾಗಲೂ ನಷ್ಟ ಅನುಭವಿಸಿದವರು ವಿತರಕರು.. ಇದೀಗ ಜಾರಿ ನಿರ್ದೇಶನಾಲಯದಿಂದ ಲೈಗರ್ ನಿರ್ದೇಶಕ , ನಿರ್ಮಾಕರು , ನಟರಿಗೆ ದೊಡ್ಡ ಸಂಕಷ್ಟವೇ ಎದುರಾಗಿದೆ.
ಲೈಗರ್ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಪ್ಯಾನ್ ಇಂಡಿಯನ್ ಸಿನಿಮಾ.. ಈ ಸಿನಿಮಾ ನೂರಾರು ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗಿತ್ತು. ಆದ್ರೆ ಅದೆಲ್ಲಾ ನಿರೀಕ್ಷೆ ಹುಸಿಯಾಗಿ.. ಹೀನಾಯದಲ್ಲೇ ಹೀನಾಯವಾಗಿ ಸಿನಿಮಾ ಸೋತಿತ್ತು..
ಆದ್ರೆ ಅಕ್ರಮ ಹಣದಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿರುವ ಇಡಿ ಪುರಿ ಜಗನ್ನಾಥ್ , ಚಾರ್ಮಿ , ದೇವರಕೊಂಡಗೆ ಶಾಕ್ ನೀಡಿದೆ.. ದುಬಾರಿ ಸಂಭಾವನೆ ಪಡೆದಿದ್ದ ವಿಜಯ್ ದೇವರಕೊಂಡ ಇತ್ತೀಚೆಗೆ ಇಡಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.. ನಂತರ ಈ ಬಗ್ಗೆ ಮಾಧ್ಯಮದವರೆದುರಿಗೆ ಬಂದು ಮಾತನಾಡಿದ್ದಾರೆ,..
ಹೈದರಾಬಾದ್ ನಲ್ಲಿರುವ ಇಡಿ ಕಚೇರಿಗೆ ಭೇಟಿ ನೀಡಿ ವಿಚಾರಣೆ ಎದುರಿಸಿದ ನಂತರ ಬಂದು ಮಾತನಾಡಿರುವ ವಿಜಯ್.
ಇದು ನನ್ನ ಕರ್ತವ್ಯ ಎಂಬ ಕಾರಣಕ್ಕೆ ಅಧಿಕಾರಿಗಳನ್ನು ಭೇಟಿ ಮಾಡಿ ಬಂದೆ. “ಮಹಾನ್ ಜನಪ್ರಿಯತೆಯೊಂದಿಗೆ ಸವಾಲುಗಳು ಬರುತ್ತದೆ ಮತ್ತು ಅದರ ಬಗ್ಗೆ ನೀವು ಏನೂ ಮಾಡಲಾಗುವುದಿಲ್ಲ. ಆದರೆ ನಾನು ಇದನ್ನು ಒಂದು ಅನುಭವವಾಗಿ ನೋಡುತ್ತೇನೆ. ಅವರು ಕರೆದಾಗ ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನಾನು ಹೋಗಿ ಅವರ ಪ್ರಶ್ನೆಗಳಿಗೆ ಉತ್ತರಿಸಿದೆ” ಎಂದು ವಿಜಯ್ ಹೇಳಿದರು.
ಅವರನ್ನು 12 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ ಎಂದು ವಿಜಯ್ ಖಚಿತಪಡಿಸಿದ್ದಾರೆ. ಆದರೆ ಅವರನ್ನು ಮತ್ತೆ ಕರೆ ಮಾಡಲಾಗಿದೆಯೇ ಎಂದು ಹೇಳಲಿಲ್ಲ. ಎರಡು ವಾರಗಳ ಹಿಂದೆ, ಚಾರ್ಮಿ , ಪುರಿಯನ್ನೂ ಸಹ ಸುಮಾರು 12 ಗಂಟೆಗಳ ಕಾಲ ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
LIGER: I have answered all the questions asked – Vijay Devarakonda’s words after E D inquiry…