ಲೈಗರ್ ಚಿತ್ರಕ್ಕೆ IMDB ರೇಟಿಂಗ್ ಶಾಕ್ ನೀಡಿದ ಪ್ರೇಕ್ಷಕ ಪ್ರಭು..
ವಿಜಯ್ ದೇವರಕೊಂಡ ಅಭಿನಯಯ ಮೊದಲ ಪ್ಯಾನ್ ಇಂಡಿಯಾ ಚಿತ್ರ ಲೈಗರ್ ಪ್ರೇಕ್ಷರ್ ಮನಸ್ಸನ್ನ ಗೆಲ್ಲುವಲ್ಲಿ ವಿಫಲವಾಗಿದೆ. ಪುರಿ ನಿರ್ದೇಶನ ಚಿತ್ರ ಬಾಕ್ಸ್ ಆಫಿಸ್ ನಲ್ಲಿ ಮ್ಯಾಜಿಕ್ ಮಾಡುವಲ್ಲಿ ಎಡವಿದೆ. ಪುರಿ ಕನೆಕ್ಟ್ ಮತ್ತು ಕರಣ ಜೋಹಾರ್ ಅವರ ಧರ್ಮ ಪ್ರೊಡಕ್ಷನ್ ನಿರ್ಮಾಣದಲ್ಲಿ ಬಿಡುಗೆಯಾದ ಚಿತ್ರಕ್ಕೆ ಮೊದಲ ದಿನದಿಂದಲೇ ನೆಗೆಟೀವ್ ಟಾಕ್ ಗಳ ಹರಿದಾಡುತ್ತಿದೆ. ಟ್ವೀಟರ್ ನಲ್ಲೂ ಕೂಡ ಕಟುವಾಗಿ ವಿಮರ್ಶೆಗಳು ಕೆಳಿಬರುತ್ತಿವೆ.
ಸಿನಿಮಾ ನೋಡಿದ ಪ್ರೇಕ್ಷಕರು IMDB ನಲ್ಲಿ ಲೈಗರ್ ಗೆ ಆಘಾತಕಾರಿ ರೇಟಿಂಗ್ ನೀಡಿದ್ದಾರೆ. ಈ ವರ್ಷದ ಅಟ್ಲರ್ ಫಾಫ್ ‘ಲಾಲ್ ಸಿಂಗ್ ಚಡ್ಡಾ’ ಮತ್ತು ‘ರಕ್ಷಾ ಬಂಧನ’ ಚಿತ್ರಗಳಿಂತ ಕಡಿಮೆ ರೆಟಿಂಗ್ ನಿಡುವ ಮೂಲಕ ಪ್ರೇಕ್ಷಕರು ತಮ್ಮ ಅಸಮಧಾನವನ್ನ ತೋಡಿಕೊಂಡಿದ್ದಾರೆ.
IMDb ನಲ್ಲಿ ಲೈಗರ್ ಕೇವಲ 1.9 ರೇಟಿಂಗ್ ನೀಡಲಾಗಿದೆ. ಈ ವರ್ಷ ಪ್ರೇಕ್ಷಕರ ಮುಂದೆ ಬಂದ ಚಿತ್ರಗಳಲ್ಲೇ ಇದು ಅತ್ಯಂತ ಕಡಿಮೆ ರೇಟಿಂಗ್ ಎಂಬುದು ಗಮನಾರ್ಹ. IMDb ನಲ್ಲಿ, ‘ಲಾಲ್ ಸಿಂಗ್ ಚಡ್ಡಾ’ ಗೆ 5 ರ ರೇಟಿಂಗ್ ಸಿಕ್ಕಿದೆ. ‘ರಕ್ಷಾ ಬಂಧನ’ 4.6 ರ ರೇಟಿಂಗ್ ನ್ನ ಹೊಂದಿದೆ, ‘Shamshera’ 4.9 ಮತ್ತು ‘Dobaara’ ಗೆ 2.9 ರೇಟಿಂಗ್ ಸಿಕ್ಕಿದೆ.
ಈ ರೇಟಿಂಗ್‌ಗಳನ್ನು ನೋಡಿದ ಕೆಲವರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಮೈಕ್ ಟೈಸನ್, ರಮ್ಯಾ ಕೃಷ್ಣ, ವಿಶು ರೆಡ್ಡಿ, ರೋನಿತ್ ರಾಯ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರಕ್ಕಾಗಿ ವಿಜಯ್ ಭಾರೀ ಸಂಭಾವನೆ ತೆಗೆದುಕೊಂಡಿದ್ದಾರೆ. ಅಂದಾಜು ರೂ. 35 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅನನ್ಯಾ ಪಾಂಡೆ ರೂ.3 ಕೋಟಿ, ರೋನಿತ್ ರಾಯ್ ರೂ. 1.5 ಕೋಟಿ, ರಮ್ಯಾ ಕೃಷ್ಣ ಕೋಟಿ ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ.








