Vijay Devarakonda: ಲೈಗರ್ ಸೋಲು – ಹೊಣೆ ಹೊತ್ತುಕೊಂಡು ಸಂಭಾವನೆ ಹಿಂತಿರುಗಿಸಿದ ನಟ..
ಈ ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಒಂದಾಗಿದ್ದ ಲೈಗರ್ ಸಿನಿಮಾ ಬಿಡುಗಡೆಯಾಗಿ ನಿರಾಸೆ ಅನುಭವಿಸಿದೆ. ಬಿಡುಗಡೆಗೂ ಮುನ್ನ ಕ್ರಿಯೇಟ್ ಮಾಡಿದ್ದ ಕ್ರೇಜ್ ತಲುಪುವಲ್ಲಿ ಸಿನಿಮಾ ಸೋತಿದೆ.
ಸಿನಿಮಾದ ಕಂಟೆಂಟ್, ಬಾಯ್ಕಟ್ ಅಭಿಯಾನ, ಈ ವಿಷಯದಲ್ಲಿ ನಟ ವಿಜಯ್ ದೇವರಕೊಂಡ ತೋರಿಸಿದ ದರ್ಪವೇ ಸಿನಿಮಾ ಸೋಲಿಗೆ ಕಾರಣ ಎಂದು ವಿಶ್ಲೇಶಿಸಲಾಗುತ್ತಿದೆ. ಹಿಂದಿ ಸಿನಿಮಾ ರಂಗದ ವಿಮರ್ಶಕರು ಕೂಡ ಸಿನಿಮಾದ ಬಗ್ಗೆ ನೆಗಟೀವ್ ಕಮೆಂಟ್ ಮಾಡಿದ್ದರಿಂದ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ವಿಫಲವಾಯಿತು. ಈ ಸೋಲಿನ ಹೊಣೆಯನ್ನು ಸ್ವತಃ ವಿಜಯ್ ದೇವರಕೊಂಡ ಹೊತ್ತಿದ್ದಾರೆ.
ಲೈಗರ್ ಸಿನಿಮಾದ ಸಂಪೂರ್ಣ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿರುವ ವಿಜಯ್ ದೇವರಕೊಂಡ ತಾವು ಪಡೆದಿದ್ದ ಸಂಭಾವನೆಯನ್ನು ವಾಪಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಲೈಗರ್ ಚಿತ್ರವನ್ನ ನಿರ್ದೇಶಸಿದ್ದ ಪುರಿ ಜಗನ್ನಾಥ್ ಮತ್ತು ನಟಿ ಚಾರ್ಮಿ ಕೌರ್ ಜಂಟಿಯಾಗಿ ಹಣ ಹೂಡಿದ್ದರು. ಈ ಸಿನಿಮಾಗೆ ವಿಜಯ್ ದೇವರಕೊಂಡ 25 ಕೋಟಿ ಸಂಭಾವನೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಅಷ್ಟೂ ಹಣವನ್ನು ಚಾರ್ಮಿ ಕೌರ್ ಮತ್ತು ಪುರಿ ಜಗನ್ನಾಥ್ ಅವರಿಗೆ ವಾಪಸ್ಸು ಮಾಡಿದ್ದಾರೆ ಎಂದು ವರದಿ ಆಗಿದೆ.
ಬಾಲಿವುಡ್ ನ ಸಾಲು ಸಾಲು ಸಿನಿಮಾಗಳು ಸೋಲುತ್ತಿರುವ ನಡುವೆ ದಕ್ಷಿಣದ ಈ ಚಿತ್ರ ಮತ್ತೆ ಮ್ಯಾಜಿಕ್ ಮಾಡಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿದ್ದು, ಚಿತ್ರ ಹೀನಾಯವಾಗಿ ಸೋಲನುಭವಿಸಿದೆ.








