ಸಮಾಜದ ಸ್ವಾಸ್ತ್ಯಕ್ಕಾಗಿ ವಾಕ್ ಸ್ವಾತಂತ್ರ್ಯಕ್ಕೆ ಮಿತಿ ಅವಶ್ಯಕ
ವಾಸ್ತವ ಸಮಾಜವನ್ನು ಗಮನಿಸುತ್ತಿದ್ದರೆ ಈ ಕಾಲಮಾನದಲ್ಲಿ ವಾಕ್ ಸ್ವಾತಂತ್ರ್ಯ ಅನ್ನುವುದು ದೊಡ್ಡ ಪ್ರಮಾಣದಲ್ಲಿ ದುರುಪಯೋಗ ದಾರಿಯಲ್ಲಿ ಸಾಗುತ್ತಿರುವುದು ಕಾಣಸಿಗುತ್ತದೆ. ಸಮಾಜದ ಸ್ವಾಸ್ತ್ಯದ ದೃಷ್ಟಿಯಿಂದ ಈ ಹಂತದಲ್ಲೇ ಎಚ್ಚರಿಕೆ ತೆಗೆದುಕೊಳ್ಳದೆ ಸುಮ್ಮನಿದ್ದದ್ದೇ ಆದಲ್ಲಿ ಇದೇ ವಾಕ್ ಸ್ವಾತಂತ್ರ್ಯ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಮಾರಕವಾಗಿ ಪರಿಣಮಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಸಮಾಜಕ್ಕೆ ತಿಳಿದಿರುವ ವಿಷಯವೆಂದರೆ, ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರು ಏನನ್ನು ಬೇಕಾದರೂ, ಹೇಗೆ ಬೇಕಾದರೂ, ತನ್ನಿಚ್ಛೆಯಂತೆ ಹೇಳಬಹುದು, ತನ್ನ ಮೂಗಿನ ನೇರಕ್ಕೆ ಹೇಳಬಹುದು, ಯಾರ ಬಗ್ಗೆ ಏನೇ ಹೇಳುವುದಾದರೂ ಹೇಳುವವನಿಗೆ ಯಾವುದೇ ಮಾನದಂಡದ ಅಗತ್ಯ ಇರುವುದಿಲ್ಲ. ವಾಕ್ ಸ್ವಾತಂತ್ರ್ಯ ಇದೆ ಎನ್ನುವುದೊಂದೇ ಮಾನದಂಡ ಎನ್ನುವ ಮಟ್ಟಿಗೆ ನಮ್ಮ ಸಮಾಜ ಬಂದು ನಿಂತಿದೆ. ಸಾಮಾಜಿಕ ಸ್ವಾಸ್ತ್ಯದ ಚಿಂತನೆಗೆ ನ್ಯಾಯದ ವ್ಯವಸ್ಥೆ ನಮಗೆ ನೀಡಿದ ವಾಕ್ ಸ್ವಾತಂತ್ರ್ಯ ಒಂದು ವಿಮರ್ಶೆಯುಕ್ತ ದಾರಿಯ ಜೊತೆಗೆ ಚರ್ಚೆಯ ದಾರಿಯಲ್ಲಿಯೂ ಇರುವುದು ಸರಿಯಾದ ಚಿಂತನೆ. ಆದರೆ ವಾಸ್ತವದಲ್ಲಿ ಹಾಗಾಗದೆ ಎಲ್ಲೆಲ್ಲೋ ಸಾಗುವ ದುರಂತ ಸನ್ನಿವೇಶಕ್ಕೆ ನಾಂದಿಯಾಗುವ ಸಾಧ್ಯತೆ ಬಹುತೇಕ ಕಡೆಗಳಲ್ಲಿ ಕಾಣಿಸುತ್ತಿದೆ. ಇಂದಿನ ದಿನಮಾನದಲ್ಲಿ ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಒಂದೊಂದು ಘಟನೆಗಳು ಮನೆ ಮನಗಳಲ್ಲಿ ಬೀರುತ್ತಿರುವ ಪರಿಣಾಮ ಗಮನಿಸಿದಾಗ ಸಮಾಜದ ಭವಿಷ್ಯದ ಬಗ್ಗೆ ಊಹಿಸಿದಲ್ಲಿ ಭಯ ಕಾಡುವುದಂತೂ ಸತ್ಯ. ಈ ಹಿನ್ನೆಲೆಯಲ್ಲಿ ಈ ಸ್ವಾತಂತ್ರ್ಯಕ್ಕೆ ಒಂದು ಮಿತಿಯ ಕಡಿವಾಣವನ್ನು ನಮ್ಮ ನ್ಯಾಯ ವ್ಯವಸ್ಥೆ ನಿರ್ಣಯಿಸುವ ಅಗತ್ಯ ಇದೆ ಅನ್ನುವುದು ವಾಸ್ತವ. ಕಾರಣ ಇಷ್ಟೇ ಯುವ ಪೀಳಿಗೆಯ ಹಿತ ಚಿಂತನೆ, ಸಾಧಕರ ಗೌರವದ ಚಿಂತನೆ, ಸಮಾಜದ ಆರೋಗ್ಯದ ಚಿಂತನೆ ಈ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ರೂಪಿತವಾದ ಒಂದು ಕಾನೂನು ನಮಗೆ ಅಗತ್ಯ. ಇಂತಹ ಒಂದು ಕಾನೂನಿನ ಜಾರಿಯಾದಲ್ಲಿ ಒಂದಷ್ಟು ಸ್ವಸ್ತ ಸಮಾಜದ ನಿರೀಕ್ಷೆ ಸಾಧ್ಯ…
ನಾಗರಾಜ ನಕ್ಷತ್ರಿ, ಆಧ್ಯಾತ್ಮಿಕ ಚಿಂತಕರು, ಖ್ಯಾತ ಜ್ಯೋತಿಷಿಗಳು
ಔಷಧಿ ಇಲ್ಲದೆ ಹೈ ಬಿಪಿಗೆ ಹೇಳಿ ಗುಡ್ ಬೈ! ಮಾತ್ರೆ ಬಿಡಿ ಈ ಜೀವನಶೈಲಿ ರೂಢಿಸಿಕೊಳ್ಳಿ
ಇಂದಿನ ಧಾವಂತದ ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯ ಒತ್ತಡಕ್ಕೆ ಸಿಲುಕಿದ್ದಾರೆ. ಕಚೇರಿಯ ಕೆಲಸದೊತ್ತಡ, ಕೌಟುಂಬಿಕ ಸಮಸ್ಯೆಗಳು ಮತ್ತು ಬದಲಾದ ಜೀವನಶೈಲಿಯು ಮನುಷ್ಯನ ಆರೋಗ್ಯದ ಮೇಲೆ ಗಂಭೀರ...








