Lionel Messi : ಹಲವಾರು ದಾಖಲೆಗಳ ಮುಡಿಗೇರಿಸಿಕೊಂಡ ಮೆಸ್ಸಿ..!!
ಫಿಫಾ ವಿಶ್ವಕಪ್ನಲ್ಲಿ ಅರ್ಜೆಂಟಿನಾ ತಂಡ ವಿಶ್ವ ಚಾಂಪಿಯನ್ನಾಗಿ ಹೊರ ಹೊಮ್ಮಿದೆ.ಅರ್ಜೆಂಟಿನಾ ಗೆಲುವಿನ ಹಿಂದೆ ಲಿಯೊನೆಲ್ ಮೆಸ್ಸಿ ಪ್ರಮುಖ ಪಾತ್ರವಿದೆ.
ಮೆಸ್ಸಿ ಈ ಬಾರಿಯ ಟೂರ್ನಿಯಲ್ಲಿ ಮಿಂಚು ಹರಿಸಿದ್ದಾರೆ.
ಈ ವಿಶ್ವಕಪ್ನಲ್ಲಿ ಅರ್ಜೆಂಟಿನಾಗೆ 5 ಪೆನಾಲ್ಟಿ ಅವಕಾಶಗಳು ದೊರೆತವು. ನಾಲ್ಕು ಅವಕಾಶಗಳಲ್ಲಿ ಮೆಸ್ಸಿ ಗೋಲು ಹೊಡೆದರು. ವಿಶ್ವಕಪ್ ಆವೃತ್ತಿಯೊಂದರಲ್ಲಿ ತಂಡವೊಂದಕ್ಕೆ ಅತಿ ಹೆಚ್ಚು ಪೆನಾಲ್ಟಿ ದಾಖಲೆ ಇದು.1966ರಲ್ಲಿ ಡಚ್, 1978ರಲ್ಲಿ ಪೋರ್ಚುಗಲ್ ತಂಡಕ್ಕೆ ತಲಾ 4 ಪೆನಾಲ್ಟಿ ಅವಕಾಶ ಸಿಕ್ಕಿತ್ತು.
35 ವರ್ಷದ ಮೆಸ್ಸಿಗೆ ಇದು ಕೊನೆಯ ವಿಶ್ವಕಪ್. ವಿಶ್ವಕಪ್ ಫೈನಲ್ನಲ್ಲಿ ಗೋಲು ಬಾರಿಸಿದ 2ನೇ ಅತಿ ಹಿರಿಯ ಆಟಗಾರ.1958ರ ಫೈನಲ್ ನಲ್ಲಿ ಬ್ರೆಜಿಲ್ ವಿರುದ್ಧ ಸ್ವೀಡನ್ನಲ್ಲಿ ನಿಲ್ಸ್ ಲಿಯೆಡ್ಹಲ್ಮ್ ಗೋಲು ಬಾರಿಸಿದ್ದರು. ಅವರಿಗೆ 35 ವರ್ಷ 264 ದಿನ ವಯಸ್ಸಾಗಿತ್ತು.
ವಿಶ್ವಕಪ್ ಫುಟ್ಬಾಲ್ ಇತಿಹಾಸದಲ್ಲೆ ಗುಂಪು ಹಂತ ಪ್ರಿ ಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್, ಸೆಮಿಫೈನಲ್,ಫೈನಲ್ನಲ್ಲಿ ಗೋಲು ಬಾರಿಸಿದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಲಿಯೊನೆಲ್ ಮೆಸ್ಸಿ ಬರೆದಿದ್ದಾರೆ.








