lionel messi : ವಿದಾಯ ಹೇಳಲು ಹೊರಟಿದ್ದವ ವಿಶ್ವಕಪ್ ಎತ್ತಿಹಿಡಿದ…
ಲಿಯೋನಾಲ್ ಮೆಸ್ಸಿ ದೇಹ ಕುಳ್ಳದಾದರೂ ಪ್ರತಿಭೆಯಲ್ಲಿ ದೈತ್ಯ . ಇಂಥ ವ್ಯಕ್ತಿ ವಿಶ್ವಕಪ್ ಗೆಲ್ಲುವ ಮುನ್ನವೇ ವಿದಾಯ ಹೇಳಲು ಸಜ್ಜಾಗಿದ್ದರು ಎನ್ನುವ ವಿಷಯ ಗೊತ್ತಾ ?
ಅದು 2014 ರ ಪುಟ್ಬಾಲ್ ವಿಶ್ವಕಪ್, ಫೈನಲ್ನಲ್ಲಿ ಜರ್ಮನಿ ಎದುರು ಸೋತು ಅರ್ಜೆಂಟೀನಾ ರನ್ನರ್ ಆಪ್ ಆಗಿತ್ತು. 2016 ರಲ್ಲಿ ನಡದ ಕೋಪಾ ಅಮೇರಿಕಾ ಕಪ್ ನ ಫೈನಲ್ನಲ್ಲಿ ಚಿಲಿಯಿಂದ ಸೋತಿತ್ತು. ಇದಾದ ನಂತರ ಬೇಸರಗೊಂಡ ಮೆಸ್ಸಿ ರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳುವುದಾಗಿ ಘೋಷಿಸಿದ್ದರು. ಆದರೆ, ಅಭಿಮಾನಿಗಳ ಮನವಿಯಿಂದಾಗಿ ತಮ್ಮ ನಿರ್ಧಾರ ಬದಲಿಸಿದ ಮೆಸ್ಸಿ 2018ರ ವಿಶ್ವಕಪ್ ನಲ್ಲಿ ಮತ್ತೊಮ್ಮೆ ತಂಡದ ಸಾರಥ್ಯ ವಹಿಸಿಕೊಂಡರು. ಆದರೆ, ಪ್ರೀ ಕ್ವಾರ್ಟರ್ ನಲ್ಲಿ ಫ್ರಾನ್ಸ್ ವಿರುದ್ಧ ಸೋತು ಮನೆಗೆ ತೆರಳಿದ್ದರು. ಇದರಿಂದ ಮನನೊಂದ ಮೆಸ್ಸಿ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಮುಂದಾದಾಗ ಪ್ರಸ್ತುತ ಕೋಚ್ ಸ್ಕಾಲೋನಿ ಅವರ ಮಾತಿನ ಮೇರೆಗೆ ವಿದಾಯದ ಆಲೋಚನೆ ಕೈ ಬಿಟ್ಟು ‘ಮಿಷನ್ 2022’ ಗಾಗಿ ಪ್ಲಾನ್ ಶುರು ಹಚ್ಚಿಕೊಂಡರು.
ಆದರೇ ಕತಾನ್ ವಿಶ್ವಕಪ್ ನ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ಕೈಯಲ್ಲಿ ಹೀನಾಯ ಸೋಲನುಭವಿಸಿ ತಂಡ ಒತ್ತಡಕ್ಕೆ ಸಿಲುಕಿತ್ತು. ಇಂತಹ ಸಂದಿಗ್ಧ ಸಂದರ್ಭಗಳಲ್ಲಿ ಮೆಸ್ಸಿ ತಂಡಕ್ಕೆ ಸ್ಫೂರ್ತಿ ತುಂಬುವ ಮೂಲಕ ಮನೆಯ ಹಿರಿಯರಂತೆ ಮಾರ್ಗದರ್ಶನ ನೀಡಿದರು. ಎಲ್ಲ ಒತ್ತಡವನ್ನ ತಾನೇ ಹೊತ್ತುಕೊಂಡರು.
ವಿಶ್ವಕಪ್ ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಮೆಸ್ಸಿ ಎಲ್ಲಾ ಪೆನಾಲ್ಟಿ ಕಿಕ್ ಗಳನ್ನ ಗಳಿಸಿದ್ದು ಇದಕ್ಕೆ ಸಾಕ್ಷಿ. ಇದರ ಜೊತೆಗೆ ಅಲ್ವಾರೆಜ್ಗೆ ಉತ್ತೇಜನ ನೀಡಿ ಗೋಲುಗಳ ಹಾದಿಯನ್ನ ಸುಗಮಗೊಳಿಸಿದರು. ಈ ಬಾರಿ, ಮೆಸ್ಸಿಯ ಆಟದಲ್ಲಿ ಮಾತ್ರವಲ್ಲ ಮೆಸ್ಸಿಯ ಬಾಡಿ ಲಾಂಗ್ವೇಜ್ ಕೂಡ ಬದಲಾಗಿತ್ತು. ಇಷ್ಟು ದಿನ ಸೌಮ್ಯವಾಗಿ ಕಾಣುತ್ತಿದ್ದ ಮೆಸ್ಸಿ ಈಗ ಬೆಟ್ಟ ಕುಟ್ಟಿ ಪುಡಿ ಮಾಡುವನಂತೆ ಕಾಣುತ್ತಿದ್ದ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಕೈಲಿಯನ್ ಎಂಬಪ್ಪೆ ನೀಡಿದ ಸವಾಲಿಗೆ ಹೆಚ್ಚುವರಿ ಸಮಯದಲ್ಲಿ ಗೋಲು ಬಾರಿಸಿ ತಂಡಕ್ಕೆ ಪೂರ್ಣ ಸ್ಪೂರ್ತಿ ಮತ್ತು ಉತ್ಸಹ ತುಂಬಿದ್ದ. ಪೆನಾಲ್ಟಿ ಶೂಟೌಟ್ ನಲ್ಲಿ ತಂಡದ ಪರ ಮೊದಲ ಕಿಕ್ ಗಳಿಸಿದ ಲಿಯೊನೆಲ್ ಸಹ ಆಟಗಾರರ ಒತ್ತಡ ಕಡಿಮೆ ಮಾಡಿದರು. ವಯಸ್ಸಿಗೆ ತಕ್ಕಂತೆ ಪ್ರಬುದ್ಧ ನಾಯಕನಾಗಿ ಸಾರ್ವತ್ರಿಕ ಫಾರ್ಮ್ ತೋರಿದ ಮೆಸ್ಸಿ ವರ್ಲ್ಡ್ ಕಪ್ ಗೆ ಮುತ್ತಿಟ್ಟ.
ಪೀಲೆ ಮತ್ತು ಮರಡೋನಾ ಆಯಾ ಕಾಲದಲ್ಲಿ ದೈತ್ಯರಾಗಿದ್ದರು. ಆದರೆ, ಇಂದಿನ ಪೀಳಿಗೆಗೆ ‘ಸಾರ್ವಕಾಲಿಕ ಶ್ರೇಷ್ಠ ಮೆಸ್ಸಿ..!