ADVERTISEMENT
Sunday, March 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

2020ರಲ್ಲಿ ನಡೆದಿರುವ ಮೂರನೇ ವಿಮಾನ ದುರಂತ… 2010ರಿಂದ ಇಲ್ಲಿಯವರೆಗೆ ನಡೆದಿರುವ ವಿಮಾನ ದುರಂತಗಳ ಪೂರ್ತಿ ವಿವರ ಇಲ್ಲಿದೆ..

admin by admin
August 8, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

2020ರಲ್ಲಿ ನಡೆದಿರುವ ಮೂರನೇ ವಿಮಾನ ದುರಂತ… 2010ರಿಂದ ಇಲ್ಲಿಯವರೆಗೆ ನಡೆದಿರುವ ವಿಮಾನ ದುರಂತಗಳ ಪೂರ್ತಿ ವಿವರ ಇಲ್ಲಿದೆ..

   ಆಗಸ್ಟ್ 7 2020- ಕರಿಪ್ಪುರ್ ವಿಮಾನ ದುರಂತ

Related posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

March 22, 2026
ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

March 22, 2026

ಆಗಸ್ಟ್ 7, 2020. ರಾತ್ರಿ 7.10ಕ್ಕೆ ದುಬೈನಿಂದ ಕ್ಯಾಲಿಕಟ್‍ಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ನೆಲಕ್ಕೆ ಅಪ್ಪಳಿಸಿ ಪತನಗೊಂಡಿದೆ. ಈ ಘಟನೆಯಲ್ಲಿ ಸದ್ಯದ ವರದಿಯ ಪ್ರಕಾರ ಪೈಲೆಟ್ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ದುರಂತ ನಡೆದಿದೆ ಎನ್ನಲಾಗುತ್ತಿದೆ. ವಿಮಾನದಲ್ಲಿ ಒಟ್ಟು 191 ಮಂದಿ ಪ್ರಯಾಣಿಕರಿದ್ದರು.

ಮೇ 22, 2010 ಮಂಗಳೂರು ವಿಮಾನ ದುರಂತ

ಅಂದ ಹಾಗೇ ಈ ದುರುಂತ 2010 ಮೇ 22ರಂದು ಮಂಗಳೂರು ವಿಮಾನ ದುರಂತವನ್ನು ನೆನಪಿಸುವಂತಿದೆ. ಪೈಲೆಟ್ ತಪ್ಪು ನಿರ್ಧಾರದಿಂದಾಗಿ ಈ ದುರಂತದಲ್ಲಿ 158 ಮಂದಿ ಸಾವನ್ನಪ್ಪಿದ್ದರು. ಬದುಕಿ ಉಳಿದವರು ಎಂಟು ಮಂದಿ ಮಾತ್ರ. ಒಟ್ಟು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ 166 ಮಂದಿ ಪ್ರಯಾಣಿಕರಿದ್ದರು. ಇದೀಗ ಹತ್ತು ವರ್ಷಗಳ ಬಳಿಕ ನೆರೆಯ ಕೇರಳದ ಕರಿಪ್ಪುರ್ ವಿಮಾಣ ನಿಲ್ದಾಣದಲ್ಲಿ ದುರಂತ ಸಂಭವಿಸಿದೆ. ಒಟ್ಟಾರೆ 2020ರಲ್ಲಿ ಅಂದ್ರೆ ಕಳೆದ ಎಂಟು ತಿಂಗಳಿನಲ್ಲಿ ವಿಶ್ವದ್ಯಾಂತ ನಡೆದಿರುವ ಮೂರನೇ ಘಟನೆ ಇದಾಗಿದೆ.

ಜನವರಿ 2020 – ಉಕ್ರೇನ್ ವಿಮಾನ ದುರಂತ

2020ರ ಜನವರಿಯಲ್ಲಿ ಉಕ್ರೇನ್ ನ ಟೆಹ್ರಾನ್ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ದುರಂತದಲ್ಲಿ ಒಟ್ಟು 176 ಮಂದಿ ಸಾವನ್ನಪ್ಪಿದ್ದರು. ವಿಮಾನದಲ್ಲಿ 167 ಮಂದಿ ಪ್ರಯಾಣಿಕರು ಮತ್ತು 9 ಮಂದಿ ಸಿಬ್ಬಂದಿಗಳಿದ್ದರು.

ಮೇ 2020- ಪಾಕಿಸ್ತಾನದಲ್ಲಿ ವಿಮಾನ ದುರಂತ

ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್ ಲೈನ್ಸ್ 2020ರ ಮೇ ತಿಂಗಳಿನಲ್ಲಿ ದುರಂತ ಸಂಭವಿಸಿದ್ದು, 98 ಮಂದಿ ಸಾವನ್ನಪ್ಪಿದ್ದಾರೆ. ಈ ವಿಮಾನದಲ್ಲಿ ಒಟ್ಟು 107 ಮಂದಿ ಪ್ರಯಾಣಿಕರಿದ್ದರು. ಈ ದುರಂತ ಕರಾಚಿ ವಿಮಾನ ನಿಲ್ದಾಣದ ಬಳಿ ಸಂಭವಿಸಿದೆ.

ಡಿಸೆಂಬರ್ 6, 2016ರಲ್ಲಿ ಪಾಕಿಸ್ತಾನ ಏರ್ ಲೈನ್ಸ್ ದುರಂತ

ಇನ್ನು ಡಿಸೆಂಬರ್ 6, 2016ರಲ್ಲಿ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನವು ಇಸ್ಲಾಮಾಬಾದ್ ನಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 48 ಮಂದಿ ದುರ್ಮರಣಕ್ಕಿಡಾಗಿದ್ದಾರೆ.

ಮೇ 2019 ರಷ್ಯಾ ವಿಮಾನ ದುರಂತ

2019ರ ಮೇನಲ್ಲಿ ರಷ್ಯಾ ಏರೋ ಫ್ಲೋಟ್ ವಿಮಾನ ದುರಂತ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 49 ಮಂದಿ ಸಾವನ್ನಪ್ಪಿದ್ದರು. ಇದು ತುರ್ತು ಲ್ಯಾಂಡಿಂಗ್ ವೇಳೆ ಬೆಂಕಿ ಸ್ಪೋಟವಾಗಿರುವುದರಿಂದ ಈ ಘಟನೆ ನಡೆದಿದೆ.

ಮಾರ್ಚ್ 10, 2019 ಇಥಿಯೋಪಿಯನ್ ವಿಮಾನ ದುರಂತ

ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಆಡಿಸ್ ಅಬಾಬಾ ದಿಂದ ಕೀನ್ಯಾದ ರಾಜಧಾನಿ ನೈರೋಬಿಗೆ ಪ್ರಯಾಣ ಬೆಳೆಸುತ್ತಿತ್ತು. ಆದ್ರೆ ವಿಮಾನ ಟೇಕ್ ಆಫ್ ಆಗುವಾಗಲೇ ಪತನಗೊಂಡು ವಿಮಾನದಲ್ಲಿದ್ದ 149 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿಗಳು ಸಾವನ್ನಪ್ಪಿದ್ದರು.

ಅಕ್ಟೋಬರ್ 2018 ಇಂಡೋನೇಷ್ಯಾ ಲಯನ್ ಏರ್ ಬೋಯಿಂಗ್ ದುರಂತ

2018ರಲ್ಲಿ ಸರಣಿ ಹಂತಗಳಲ್ಲಿ ವಿಮಾನ ದುರಂತಗಳು ಸಂಭವಿಸಿವೆ. ಇಂಡೋನೇಷ್ಯಾ ಲಯನ್ ಏರ್ ಬೋಯಿಂಗ್ 737 ದುರಂತ 2018ರ ಅಕ್ಟೋಬರ್ ನಲ್ಲಿ ನಡೆದಿದೆ. ಈ ದುರಂತದಲ್ಲಿ 189 ಮಂದಿ ನಿಧನರಾಗಿದ್ದರು.

ಮಾರ್ಚ್ , 2018 ಕಾಠ್ಮಂಡ್ ವಿಮಾನ ಪತನ

ಮಾರ್ಚ್ 2018ರಲ್ಲಿ ಢಾಕಾ ದಿಂದ ಪ್ರಯಾಣಿಸುತ್ತಿದ್ದ ಕಾಠ್ಮಂಡ್ ವಿಮಾನ ದುರಂತದಲ್ಲಿ 67 ಪ್ರಯಾಣಿಕರು ಮತ್ತು ನಾಲ್ಕು ಮಂದಿ ಸಿಬ್ಬಂದಿಗಳು ಸಾವನ್ನಪ್ಪಿದ್ದರು.

2018. ಮುಂಬೈ ಕರಾವಳಿಯಲ್ಲಿ ಭಾರತದ ಹೆಲಿಕಾಪ್ಟರ್ ಪತನ

ಪವನ್ ಹೇನ್ಸ್ ಹೆಲಿಕಾಪ್ಟರ್ 2018ರ ಮಾರ್ಚ್‍ನಲ್ಲಿ ಮುಂಬೈ ಕರಾವಳಿಯಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ ಒಎನ್‍ಜಿಸಿ ಸಂಸ್ಥೆಯ ಐವರು ಅಧಿಕಾರಿಗಳು ಮತ್ತು ಇಬ್ಬರು ಪೈಲೆಟ್‍ಗಳು ದುರಂತದಲ್ಲಿ ಸಾವನ್ನಪ್ಪಿದ್ದರು.

ಮಾರ್ಚ್ 2018- ಟರ್ಕಿಸ್ ಖಾಸಗಿ ವಿಮಾನ ಅಪಘಾತ

ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಇಸ್ತಾಂಬುಲ್‍ಗೆ ಪ್ರಯಾಣಿಸುತ್ತಿದ್ದ ಟರ್ಕಿಯ ಖಾಸಗಿ ವಿಮಾನ ಇರಾನ್‍ನ ಪರ್ವತ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ ಜೆಟ್ ನಲ್ಲಿದ್ದ ಎಲ್ಲಾ 11 ಮಂದಿ ಸಾವನ್ನಪ್ಪಿದ್ದಾರೆ.

ಮಾರ್ಚ್ 2018- ಸಿರಿಯಾದಲ್ಲಿ ರಷ್ಯಾದ ಮಿಲಿಟರಿ ವಿಮಾನ ಪತನ

2018ರ ಮಾರ್ಚ್ ನಲ್ಲಿ ಸಿರಿಯಾದಲ್ಲಿ ರಷ್ಯಾದ ಮಿಲಿಟರಿ ಸರಕು ವಿಮಾನ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ ರಷ್ಯಾದ 39 ಸೈನಿಕರು ಮೃತಪಟ್ಟಿದ್ದಾರೆ.

ಫೆಬ್ರವರಿ 2018- ಅಸ್ಸಾಂ ನಲ್ಲಿ ಐಎಎಫ್ ಹೆಲಿಕಾಪ್ಟರ್ ಪತನ

2018ರ ಫೆಬ್ರವರಿಯಲ್ಲಿ ಅಸ್ಸಾಂನ ಮಜುಲಿ ದ್ವೀಪದಲ್ಲಿ ಐಎಎಫ್ ಹೆಲಿಕಾಪ್ಟರ್ ಪತನಗೊಂಡಿದ್ದು, ಭಾರತದ ವಾಯುಪಡೆಯ ಇಬ್ಬರು ಪೈಲೆಟ್‍ಗಳು ಸಾವನ್ನಪ್ಪಿದ್ದಾರೆ.

ಜುಲೈ 2014 ಮಲೇಶ್ಯಾ ವಿಮಾನ ದುರಂತ

2014ರ ಜುಲೈನಲ್ಲಿ ಮಲೇಶ್ಯಾ ಏರ್ ಲೈನ್ಸ್ ವಿಮಾನ ಎಂಎಚ್17 ಪೂರ್ವ ಉಕ್ರೇನ್‍ನ ಗ್ರಾಬೋವ್ ಬಳಿ ದುರಂತಕ್ಕೀಡಾಗಿತ್ತು. ಈ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಅಂದ್ರೆ 298 ಮಂದಿ ಸಾವನ್ನಪ್ಪಿದ್ದರು.

Tags: Air India Express flight IX 812aircraft accidentsDubaiEthiopian Airlines’ Boeing-737-800 MAX crashIAF chopper crash in AssamindiaIndian chopper crashes off Mumbai coastIndonesian Lion Air’s Boeing 737Kathmandu plane crashkeralaKerala plane accidentMalaysia plane crashMangaluru International Airport.PIA flight crash in May 2020Russia plane crash – May 2019Russian military plane crash in SyriaTurkish private plane crashUkrainian airplane crash – January 2020
ShareTweetSendShare
Join us on:

Related Posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

by Shwetha
March 22, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಣಕಹಳೆ ಜೋರಾಗಿ ಮೊಳಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ...

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

by Shwetha
March 22, 2026
0

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎಂದು ಧ್ವನಿ ಎತ್ತಿದ್ದ ಮಠಾಧೀಶರ ವಿರುದ್ಧ ಸಿಎಂ ಸಿದ್ದರಾಮಯ್ಯ ನೇರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇತ್ತೀಚೆಗೆ...

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

by Shwetha
March 22, 2026
0

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ, ವಿಶೇಷವಾಗಿ...

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

by Shwetha
March 22, 2026
0

ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಬಲವಾದ ಪೆಟ್ಟು ನೀಡಲು ಹಾಗೂ ಕಳೆದುಕೊಂಡಿರುವ ತನ್ನ ಗ್ರಾಹಕರನ್ನು ಮರಳಿ ಸೆಳೆಯಲು ಸರ್ಕಾರಿ...

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

by Shwetha
March 22, 2026
0

ದೇಶದ ಕೋಟ್ಯಂತರ ಪಡಿತರ ಚೀಟಿ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರವು ಅತಿದೊಡ್ಡ ಸಿಹಿಸುದ್ದಿಯೊಂದನ್ನು ನೀಡಿದೆ. ಮುಂಬರುವ ಏಪ್ರಿಲ್ ತಿಂಗಳಿನಲ್ಲಿಯೇ ಮುಂದಿನ ಮೂರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram