ಮಿಜೋರಾಂ : ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಮಂದಿ ಹಣ ಸಹಾಯ ಮಾಡುತ್ತಿದ್ದಾರೆ. ಇದರ ಮಧ್ಯೆ ಮಿಜೋರಾಂನ ಕೋಲಾಸಿಬ್ ಪಟ್ಟಣದ ಏಳು ವರ್ಷದ ಬಾಲಕ ತನ್ನ ಪಿಗ್ಗಿ ಬ್ಯಾಂಕ್ ಅನ್ನು ಒಡೆದು ಅದರಲ್ಲಿದ್ದ ಸಂಪೂರ್ಣ ಹಣವನ್ನು ಕೊರೊನಾ ನಿಧಿಗೆ ನೀಡಿದ್ದಾನೆ.
ಹೌದು..! ಕೋಲಾಸಿಬ್ ನ ವೆಂಗ್ಲೈ ಪ್ರದೇಶದ ನಿವಾಸಿ ರೊಮೆಲ್ ಲಾಲ್ಮುವಾನ್ಸಂಗಾ ಎಂಬ ಬಾಲಕ ಕೊರೊನಾ ನಿಧಿಗೆ ಹಣ ಸಹಾಯ ಮಾಡಿದ್ದಾನೆ. ಈತ 333 ರೂ.ಗಳ ನಾಣ್ಯಗಳು ಮತ್ತು ನೋಟುಗಳನ್ನು ಹೊಂದಿರುವ ಸಣ್ಣ ಪ್ಲಾಸ್ಟಿಕ್ ಕವರ್ ಅನ್ನು ಕಾರ್ಯಪಡೆಯ ಮುಖಂಡರಿಗೆ ಹಸ್ತಾಂತರಿಸಿದ್ದಾನೆ.
ಕೋಲಾಸಿಬ್ ವೆಂಗ್ಲೈ ಮೂಲದ 7 ವರ್ಷದ ರೊಮೆಲ್ ಲಾಲ್ಮುವಾನ್ಸಂಗಾ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತನ್ನ ಸಂಪೂರ್ಣ ಉಳಿತಾಯವನ್ನು ತನ್ನ ಗ್ರಾಮ ಮಟ್ಟದ ಕಾರ್ಯಪಡೆಗೆ ದಾನ ಮಾಡಿದ್ದಾನೆ’ಎಂದು ಮುಖ್ಯಮಂತ್ರಿ ಮಿಜೋರಾಂ ಸಿಎಂ ಜೋರಾಮ್‌ಥಂಗಾ ಟ್ವೀಟ್ ಮಾಡಿದ್ದಾರೆ.








