ನವದೆಹಲಿ : ಮಹತ್ವದ ಬೆಳವಣಿಗೆಯಲ್ಲಿ ಮನಿ ಲಾಂಡರಿಂಗ್ ಕೇಸ್ ನ ವಿಚಾರಣೆಗೆ ಜಾರಿ ನಿರ್ದೇಶನಾಲಯ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅಣ್ಣ ಅಗ್ರಸೇನ ಗೆಹಲೋಟ್ ಅವರಿಗೆ ಸತತ ಮೂರು ನೋಟೀಸ್ ಜಾರಿಮಾಡಿದರು ಕೂಡ ವಿಚಾರಣೆಗೆ ಬಾರದ ಹಿನ್ನಲೆಯಲ್ಲಿ ಗೆಹಲೋಟ್ ಅವರು ಜಾರಿ ನಿರ್ದೇಶನಾಲಯದ ನೋಟೀಸ್ ಪ್ರಶ್ನಿಸಿ ರಾಜಸ್ತಾನ ಹೈ ಕೋರ್ಟ್ ನ ಮೊರೆ ಹೋಗಿದ್ದಾರೆ. ಅಕ್ರಮ ಪೊಟಾಷ್ ರಫ್ತು ಪ್ರಕರಣದಲ್ಲಿ ಜಾರಿನಿರ್ದೇಶನಾಲಯ ಹೆಚ್ಚಿನ ವಿಚಾರಣೆಗೆ ದೆಹಲಿಯ ಕೇಂದ್ರ ಕಚೇರಿಯಲ್ಲಿ ಹಾಜರಾಗಲು ಈಗಾಗಲೇ ನೋಟೀಸ್ ಮೂಲಕ ಅಗ್ರಸೈನ್ ಗೆಹಲೋಟ್ ಗೆ ತಿಳಿಸಿದೆ.
ಈ ಪ್ರಕರಣದಲ್ಲಿ ಇನ್ನೊಬ್ಬ ಪ್ರಮುಖ ಆರೋಪಿ ಸರಾಫ್ ಇಂಪೇಸ್ ಸಂಸ್ಥೆಯ ಪ್ರವೀಣ್ ಸರಾಫ್ ತಲೆಮರೆಸಿಕೊಂಡಿದ್ದು , ಜಾರಿ ನಿರ್ದೇಶನಾಲಯಕ್ಕೆ ಪತ್ರದ ಮೂಲಕ ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾನೆ ಆದರೆ ಈ ಸಂಬಂಧ ತನಿಖಾ ಸಂಸ್ಥೆ ಆರೋಪಿಯ ಬಂಧನಕ್ಕೆ ಮುಂದಾಗಿದೆ.ಸೋಮವಾರ ಗೆಹಲೋಟ್ಸ್ ನ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ.
ಪ್ರಾಥಮಿಕ ತನಿಖೆಯಲ್ಲಿ ಗೆಹಲೋಟೋ ಒಡೆತನದ ಅನುಪಮ್ ಕೃಷಿ, ಸರಾಫ್ ಇಂಪ್ಲೆಸ್ ಜೊತೆ ಸೇರಿ ಅಕ್ರಮವಾಗಿ 130 ಕೋಟಿಯಷ್ಟು ಬೆಲೆಬಾಳುವ ಸುಮಾರು ಮೂವತ್ತು ಸಾವಿರ ಟನ್ ಗಳಷ್ಟು ಪೊಟಾಷ್ ನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ ಎಂದು ತಿಳಿದು ಬಂದಿದೆ.