ಅಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್ ಸಜ್ಜು – ಪಕ್ಷದಲ್ಲಿ ಹೆಚ್ಚಿದ ಲಾಬಿ
ಗಾಂಧಿ ಕುಟುಂಬದೇತರರು ಕಾಂಗ್ರೆಸ್ ಪಕ್ಷ ಮನ್ನಡೆಸುತ್ತಾರೆ ಎಂಬುದು ಸ್ಪಷ್ಟವಾಗುತ್ತಿದೆ. ಚುನಾವಣೆ ನಿಗದಿತ ದಿನಾಂಕಕ್ಕಿಂತ ಮುಂದೂಡಲಾಗುತ್ತದೆ ಎಂಬ ವರದಿಗಳ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಹಲವು ಹೆಸರುಗಳು ಕೇಳಿ ಬರುತ್ತಿದ್ದು. ಅಧ್ಯಕ್ಷ ಹುದ್ದೆಗೆ ತೀವ್ರ ಲಾಬಿ ಪ್ರಾರಂಭವಾಗಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷವನ್ನ ಮುನ್ನಡೆಸಲು ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋನಿಯಾ ಗಾಂಧಿ ತಮ್ಮ ಅನಾರೋಗ್ಯದ ಕಾರಣದಿಂದ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಗಾಂಧಿ ಕುಟುಂಬದ ಹೊರಗಿನವರಿಗೆ ಜವಬ್ದಾರಿ ನೀಡುವು ಸಾಧ್ಯತೆ ಇದೆ.
ಸೋನಿಯಾ ಗಾಂಧಿ ಅವರನ್ನ ಬೇಟಿಯಾದ ನಂತರ ಅಧ್ಯಕ್ಷ ಹುದ್ದೆಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗ್ಲೆಹೋಟ್ ಅವರ ಹೆಸರು ಕೇಳಿಬರುತ್ತಿದೆ. ಮುಂದಿನ ವರ್ಷದ ರಾಜಸ್ಥಾನದಲ್ಲಿ ಚುನಾವಣೆಗಳು ನಡೆಯುದನ್ನ ಗಮನದಲ್ಲಿಟ್ಟುಕೊಂಡು ಅವರು ಈ ಹುದ್ದೆ ಒಪ್ಪುವುದು ಕಷ್ಟವಿದೆ.
ಪಕ್ಷದ ಹಿರಿಯ ನಾಯಕರಾದ ಅಂಬಿಕಾ ಸೋನಿ, ಮುಕುಲ್ ವಾಸ್ನಿಕ್, ಮೀರಾ ಕುಮಾರ್, ಸುಶೀಲ್ ಕುಮಾರ್ ಶಿಂಧೆ ಮತ್ತು ಕಮಲ್ ನಾಥ್ ಅವರು ಉನ್ನತ ಹುದ್ದೆಗಾಗಿ ಕಣದಲ್ಲಿರುವ ಇತರ ಪ್ರಮುಖ ಹೆಸರುಗಳಲ್ಲಿದ್ದಾರೆ. ಆದರೆ ಮುಂಬರುವ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಯಾರು ಮುನ್ನಡೆಸಬಹುದು ಎಂಬ ಬಗ್ಗೆ ಇನ್ನೂ ಒಮ್ಮತ ಮೂಡಿಲ್ಲ.