ಯೂರೋ ಕಪ್ 2021- ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಇಟಲಿ
ಯೂರೋ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಇಟಲಿ ತಂಡ ಫ್ರ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಎ ಗುಂಪಿನ ಪಂದ್ಯದಲ್ಲಿ ಇಟಲಿ 3-0 ಗೋಲುಗಳಿಂದ ಸ್ವಿಜರ್ ಲೆಂಡ್ ತಂಡವನ್ನು ಪರಾಭವಗೊಳಿಸಿತು. ಈ ಮೂಲಕ ಎರಡು ಪಂದ್ಯಗಳನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಅಲ್ಲದೆ ಪ್ರಿ ಕ್ವಾರ್ಟರ್ ಫೈನಲ್ ಹಂತವನ್ನು ಖಚಿತಪಡಿಸಿಕೊಂಡಿದೆ.
ಇಟಲಿ ತಂಡದ ಪರ ಮಾನ್ಯುಲ್ ಲೊಕಾಟೆಲಿ ಅವರು 26 ಮತ್ತು 52ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದ್ರೆ, ಕಿರೊ ಇಮೊಬಿಲ್ ಅವರು ಪಂದ್ಯದ 89 ನೇ ನಿಮಿಷದಲ್ಲಿ ಗೋಲು ಹೊಡೆಯುವ ಮೂಲಕ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದ್ರು.
ಇನ್ನು ಬಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ರಷ್ಯಾ ತಂಡ 1-0 ಗೋಲುಗಳಿಂದ ಫಿನ್ ಲೆಂಡ್ ತಂಡವನ್ನು ಮಣಿಸಿತು.
ರಷ್ಯಾದ ತಂಡದ ಪರ ಆಲೆಸ್ಕೆ ಮಿರಾಂಚುಕ್ ಅವರು ಪಂದ್ಯ 45ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನ ರೂವಾರಿಯಾದ್ರು. ಸದ್ಯ ರಷ್ಯಾ ತಂಡ ಬಿ ಬಣದಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಲೀಗ್ ನ ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸಿದ್ರೆ ಮಾತ್ರ ಮುಂದಿನ ಹಂತಕ್ಕೆ ಪ್ರವೇಶ. ಇಲ್ಲ ಅಂದ್ರೆ ಮನೆ ದಾರಿ ಹಿಡಿಯಬೇಕಾಗುತ್ತದೆ.
ಎ ಗುಂಪಿನ ಮತ್ತೊಂದು ಪಂದ್ಯದಲ್ಲಿ ವೇಲ್ಸ್ ತಂಡ 2-0 ಗೋಲುಗಳಿಂದ ಟರ್ಕಿ ತಂಡವನ್ನು ಮಣಿಸಿ ಮೊದಲ ಗೆಲುವನ್ನು ದಾಖಲಿಸಿತ್ತು. ಲೀಗ್ ನ ಮೊದಲ ಪಂದ್ಯದಲ್ಲಿ ವೇಲ್ಸ್ ತಂಡ ಡ್ರಾಗೆ ಸಮಾಧಾನಪಟ್ಟುಕೊಂಡಿತ್ತು. ಹೀಗಾಗಿ ಮೊದಲ ಗೆಲುವು ದಾಖಲಿಸಿರುವ ವೇಲ್ಸ್ ತಂಡ ಎ ಬಣದಲ್ಲಿ ಎರಡನೇ ಸ್ಥಾನದಲ್ಲಿದೆ. ಅಲ್ಲದೆ ಪ್‍ಇ ಕ್ವಾರ್ಟರ್ ಫೈನಲ್ ಪ್ರವೇಶವೂ ಬಹುತೇಕ ಖಚಿತವಾಗಿದೆ.








