ಮಾರಕ ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದು, ಮೇ 3 ರ ವರೆಗೆ ಇದು ಮುಂದುವರೆಯಲಿದೆ. ಏತನ್ಮಧ್ಯೆ ರಾಜ್ಯ ಸರ್ಕಾರ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಲಾಕ್ ಡೌನ್ ನಿರ್ಬಂಧ ಸಡಿಲಗೊಳ್ಳಲಿದ್ದು, ಬಡಗಿ, ಎಲೆಕ್ಟ್ರಿಷಿಯನ್, ಪ್ಲಂಬರ್, ಡಾಬಾ, ಕಟ್ಟಡ ನಿರ್ಮಾಣ ಕಾಮಗಾಗಿ, ಕೊರಿಯರ್ ಸೇವೆ, ಲಾರಿ ರಿಪೇರಿ ಮಾಡುವ ಗ್ಯಾರೇಜ್ ಸೇರಿದಂತೆ ಕೆಲವೊಂದು ಅಗತ್ಯ ಸೇವೆಗಳಿಗೆ ಲಾಕ್ ಡೌನ್ ಸಡಿಲಿಕೆ ನಿರ್ಬಂಧ ಅನ್ವಯಿಸಲಿದೆ. ಕೃಷಿ, ಮೀನುಗಾರಿಕೆಗೆ ಅವಕಾಶ ಸಿಗಲಿದ್ದು, ರಸ ಗೊಬ್ಬರ ಮಾರಾಟದ ಅಂಗಡಿಗಳು ತೆರೆದಿರಲಿವೆ.
ಇದಲ್ಲದೇ ಮಾಲ್, ಸಿನಿಮಾ ಥಿಯೇಟರ್, ಮೆಟ್ರೋ, ರೈಲು ಸಂಚಾರ ಕೂಡ ಓಡಾಟವಿಲ್ಲ. ಕೇವಲ ಲಾಕ್ ಡೌನ್ ಅನ್ನು ಸಡಿಲಗೊಳಸಲಾಗುತ್ತಿದೆ.








