ಕಂಟ್ರೋಲ್ ಗೆ ಬಾರದ ಕೊರೊನಾ : ಕೊಡಗಿನಲ್ಲಿ ಲಾಕ್ ಡೌನ್ ಮುಂದುವರಿಕೆ
ಮಡಿಕೇರಿ : ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಮುಂದುವರಿಸಲಾಗಿದೆ. ದಿನಾಂಕ 05.07.2021ರ ಬೆಳಗ್ಗೆ 6:00 ಗಂಟೆಯಿಂದ ದಿನಾಂಕ 19.07.2021ರ ಬೆಳಗ್ಗೆ 6:00 ಗಂಟೆಯವರೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಇರಲಿದೆ ಎಂದು ಜಿಲ್ಲಾಡಳಿತ ಆದೇಶಿಸಿದೆ.
1. ಕಂಟೈನ್ ಮೆಂಟ್ ವಲಯದಲ್ಲಿ ಯಾವುದೇ ಚಟುವಳಿಕೆಗಳು ಇರುವುದಿಲ್ಲ.
2. ಅತ್ಯವಶ್ಯಕ ಸೇವೆಗಳಡಿ ಬರುವ ತರಕಾರಿ, ಹಣ್ಣು-ಹಂಪಲು, ದಿನಸಿ, ಕೃಷಿಗೆ ಸಂಬಂಧಿಸಿದ ಅಂಗಡಿ ಮಳಿಗೆ ಮತ್ತು ದಾಸ್ತಾನು ಕೇಂದ್ರಗಳು, ಮೀನು ಮತ್ತು ಮಾಂಸದ ಮಳಿಗೆಗಳನ್ನು, ಹಾಪ್ ಕಾಮ್ಸ್ ಮಳಿಗೆಗಳನ್ನು ಸೋಮವಾರ ದಿಂದ ಶುಕ್ರವಾರದವರೆಗೆ ಬೆಳಿಗ್ಗೆ 06.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಿದೆ.
3. ಕೃಷಿ ಪರಿಕರವಾದ ರಸಗೊಬ್ಬರವನ್ನು ರೈತರು ಈಗಾಗಲೇ ನಿಗದಿಪಡಿಸಿರುವ ದಿನಗಳಲ್ಲಿ (ಸೋಮವಾರ ದಿಂದ ಶುಕ್ರವಾರದವರೆಗೆ) ನಿಗದಿಪಡಿಸಿದ ಸಮಯದಲ್ಲಿ (ಬೆಳಗ್ಗೆ 6.00 ರಿಂದ ಮಧ್ಯಾಹ್ನ 02.00) ರಸೀದಿ ಮಾಡಬಹುದು.
4. ಪಡಿತರ ನ್ಯಾಯಬೆಲೆ ಮಳಿಗೆಗಳು ಸೋಮವಾರ ದಿಂದ ಶುಕ್ರವಾರದವರೆಗೆ ಮಾತ್ರ ತೆರೆಯಲು ಅನುಮತಿಸಿದೆ.
5. ಆಸ್ಪತ್ರೆ, ಔಷಧಾಲಯ, ವೈದ್ಯಕೀಯ ಸೇವೆಗಳು, ಪೆಟ್ರೋಲ್ ಬಂಕ್ ಗಳು, ಎಲ್.ಪಿ.ಜಿ ಕೇಂದ್ರಗಳ 24*7 ಕಾರ್ಯಚಟುವಟಿಕೆಗೆ ಅನುಮತಿಸಲಾಗಿದೆ.
6. ಹೋಟೆಲ್ / ರೆಸ್ಟೋರೆಂಟ್ ಗಳಿಂದ ಆಹಾರವನ್ನು ಟೇಕ್ ಅವೆ (ಪಾರ್ಸಲ್) ರೂಪದಲ್ಲಿ ಸೋಮವಾರ ದಿಂದ ಶುಕ್ರವಾರದವರೆಗೆ ಬೆಳಗ್ಗೆ 06.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಪಡೆಯಲು ಅನುಮತಿಸಿದೆ.
7. ಮದ್ಯ ಅಂಗಡಿ ಸೋಮವಾರ ದಿಂದ ಶುಕ್ರವಾರದವರೆಗೆ ಬೆಳಗ್ಗೆ 06.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಮಾತ್ರ ಅನುಮತಿಸಿದೆ.
8. ಜಿಲ್ಲೆಗೆ ಆಗಮಿಸುವವರಿಗೆ ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇರತಕ್ಕದ್ದು.
9. ಪ್ರತಿ ದಿನ ರಾತ್ರಿ 9.00 ರಿಂದ ಬೆಳಿಗ್ಗೆ 6.00 ರವರೆಗೆ ರಾತ್ರಿ ಕಫ್ರ್ಯೂ ಜಾರಿಯಲ್ಲಿರುತ್ತದೆ ಮತ್ತು ಶುಕ್ರವಾರ ರಾತ್ರಿ 9.00 ರಿಂದ ಸೋಮವಾರ ಬೆಳಗ್ಗೆ 6.00 ರವರೆಗೆ ವಾರಾಂತ್ಯ ಕಫ್ರ್ಯೂ ಜಾರಿಯಲ್ಲಿರುತ್ತದೆ.