ಲಾಕ್ ಡೌನ್ ಎಫೆಕ್ಟ್.. ಕೈ ಕೊಟ್ಟ ಆಂಬುಲೆನ್ಸ್.. ಸ್ಕೂಟಿನಲ್ಲಿ ಗಾಯಾಳು ಆಸ್ಪತ್ರೆಗೆ hosapete
ವಿಜಯನಗರ : ಸಕಾಲಕ್ಕೆ ಆಂಬುಲೆನ್ಸ್ ಬರದ ಕಾರಣ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನ ಸಾರ್ವಜನಿಕರೊಬ್ಬರು ಸ್ಕೂಟಿಯಲ್ಲಿ ಆಸ್ಪತ್ರೆಗೆ ಸಾಗಿಸಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಸಂಬಂದಿಯೊಬ್ಬರ ಮದುವೆಗೆ ಪರವಾನಿಗೆ ಪಡೆಯಲು ಹೊಸೂರಿನ ಕಿಚಡಿ ಪಂಪಾಪತಿ ಬೈಕ್ ನಲ್ಲಿ ಹೊಸಪೇಟೆ ತಹಸಿಲ್ದಾರ್ ಕಚೇರಿಗೆ ಬಂದಿದ್ದರು. ಬೈಕ್ ನಿಲ್ಲಿಸುವ ವೇಳೆ ಚಾಲಕನ ಆಯಾ ತಪ್ಪ ಗಾಡಿ ನೆಲಕ್ಕುರುಳಿದ್ದು, ಕಿಚಡಿ ಪಂಪಾಪತಿ ಅವರ ಕಾಲು ಚಕ್ರದಲ್ಲಿ ಸಿಲುಕಿದೆ. ಅಲ್ಲದೆ ಇದೇ ವೇಳೆ ಬೈಕ್ ಸವಾರನ ಕೈಯಲ್ಲಿದ್ದ ಎಕ್ಷಲೆಟರ್ ರೈಸಾಗಿ ಚಕ್ರ ತಿರುಗಿದ ಕಾರಣ ಪಂಪಾಪತಿ ಅವರ ಕಾಲು ತುಂಡಾಗಿದೆ.
ಕೂಡಲೇ ಅಧಿಕಾರಿಗಳು ಆತನ ಸಹಾಯಕ್ಕೆ ಧಾವಿಸಿದ್ದು, ಕಾಲನ್ನು ಚಕ್ರದಿಂದ ಹೊರತೆಗೆದಿದ್ದಾರೆ. ಅಲ್ಲದೇ ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದ್ರೆ ಆಂಬುಲೆನ್ಸ್ ಸಕಾಲಕ್ಕೆ ಬರದೇ ಇರುವ ಕಾರಣ ಸುಮಾರು ಏಳು ಕಿಲೋಮೀಟರ್ ಬೈಕ್ ಮೇಲೆ ಹೊತ್ತು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.








