ರಾಜ್ಯದಲ್ಲಿ ಲಾಕ್ ಡೌನ್ Lockdown ಅನಿವಾರ್ಯ : ಸುಧಾಕರ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆ ಆಗಬೇಕಾದರೆ ಲಾಕ್ ಡೌನ್ ಅನಿವಾರ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಕಾ ಕಫ್ರ್ಯೂ ವಿಫಲವಾಗಿದೆ.
ಸದ್ಯ ಪರಿಸ್ಥಿತಿಗೆ ರಾಜ್ಯದಲ್ಲಿ ಲಾಕ್ ಡೌನ್ ಅನಿವಾರ್ಯವಾಗಿದೆ. ಇಲ್ಲದೇ ಹೋದ್ರೆ ಸಾವು-ನೋವು ಜಾಸ್ತಿ ಆಗುತ್ತದೆ.
ಆರೋಗ್ಯ ಇಲಾಖೆ ಲಾಕ್ ಡೌನ್ ಅನ್ನು ಬಲವಾಗಿ ಪ್ರತಿಪಾದಿಸುತ್ತದೆ. ಸಿಎಂ ಜೊತೆಯೂ ಈ ಬಗ್ಗೆ ಮಾತನಾಡುತ್ತೇನೆ.
ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ತಾರೆ ಎಂದರು.
ಇನ್ನು ಲಾಕ್ ಡೌನ್ ಹೇರುವ ಬಗ್ಗೆ ಸ್ಥಳೀಯವಾಗಿಯೂ ಒತ್ತಡವಿದೆ.
ತಜ್ಞರು ಸಹ ಈ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಲಾಕ್ ಡೌನ್ ಅನಿವಾರ್ಯವಾಗಿದೆ ಎಂದು ಸುಧಾಕರ್ ಪುನರುಚ್ಚರಿಸಿದರು.










