ನವದೆಹಲಿ: ದೇಶದಾದ್ಯಂತ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದ್ದು, ಈ ಕುರಿತು ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದರು. ಅದರಂತೆ ಇಂದು ಕೇಂದ್ರದಿಂದ ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿ ರವಾನೆಯಾಗಿದೆ. ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಸುಮಾರು 2 ಪುಟಗಳಿದ್ದು, ಇದರಲ್ಲಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಇಲಾಖೆಗಳು ಲಾಕ್ ಡೌನ್ ವಿಸ್ತರಣೆ ವೇಳೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿಯನ್ನು ಸ್ಪಷ್ಟಪಡಿಸಲಾಗಿದೆ.
ಕೃಷಿ ಚಟುವಟಿಕೆಗಳ ಪುನರಾರಂಭಕ್ಕೆ ಅನುಮತಿ.
ಸಾರ್ವಜನಿಕರಿಗೆ ಸಮಸ್ಯೆ ಎದುರಾಗೋದನ್ನ ತಪ್ಪಿಸಲು ಏಪ್ರಿಲ್ 20ರಿಂದ ಎಲ್ಲಾ ಕೃಷಿ ಚಟುವಟಿಕೆಗಳ ಪುನರಾರಂಭಕ್ಕೆ ಅನುಮತಿ ನೀಡುವಂತೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಇದರ ಜೊತೆಗೆ ಐಟಿ, ಆನ್ ಲೈನ್ ಶಾಪಿಂಗ್ ಹಾಗೂ ಅಂತರ್ ರಾಜ್ಯ ಸಾರಿಗೆಗೆ ಏಪ್ರಿಲ್ 20ರಿಂದ ಅನುಮತಿ ಇರಲಿದೆ.
ಯಾವ ಪ್ರದೇಶಗಳನ್ನ ಕೊರೊನಾ ಹಾಟ್ ಸ್ಪಾಟ್ ಗಳು ಅಂತ ಗುರುತಿಸಲಾಗಿಲ್ಲವೋ, ಅಲ್ಲಿ ಕೃಷಿ ಚಟುವಟಿಕೆ, ಮತ್ತು ನಿಗದಿತ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಅನುವು ಮಾಡಿಕೊಡಲಾಗುತ್ತದೆ. ಹಾಲು, ಹಾಲಿನ ಉತ್ಪನ್ನಗಳು, ಪೌಲ್ಟ್ರಿ ಸಪ್ಲೈ, ಟೀ, ಕಾಫಿ, ರಬ್ಬರ್ ಪ್ಲಾಂಟೇಷನ್ ಗಳಿಗೆ ಕಾರ್ಯ ನಿರ್ವಹಿಸಲು ಸಡಿಲಿಕೆ ಸಿಗಲಿದೆ.
ಇನ್ನು ಮಾರ್ಗಸೂಚಿಯಲ್ಲಿ ದಿನಸಿ, ಔಷಧಿ, ಹಣ್ಣು, ಮೀನು ಮಾಂಸ ಮಾರಾಟಕ್ಕೆ ತರಕಾರಿ, ರಸಗೊಬ್ಬರ, ಬೀಜ, ಕೀಟ ನಾಶಗಳ ಮಾರಾಟಕ್ಕೆ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ ಮೇ 3ರವೆರೆಗೆ ವಿಮಾನ ಹಾರಾಟಕ್ಕೆ ಅನುಮತಿ ನೀಡಿಲ್ಲ. ಇನ್ನು ಪ್ರಿಂಟ್, ಟೆಲಿಕಾಮ್, ಮೀಡಿಯಾ, ಇಂಟರ್ ನೆಟ್ ಸೇವೆ, ಇ-ಕಾಮರ್ಸ್, ಕೇಬಲ್ ಆಪರೇಟರ್ ಸಿಬ್ಬಂದಿಗೂ ವಿನಾಯಿತಿ ನೀಡಲಾಗಿದೆ.