ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಸಣ್ಣ ಬದಲಾವಣೆ – ಅಗತ್ಯ ವಸ್ತುಗಳ ಖರೀದಿಗೆ ವಾಹನ ಬಳಸಲು ಅನುಮತಿ
ಬೆಂಗಳೂರು: ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಈ ನಡುವೆ ರಾಜ್ಯದಲ್ಲಿ ಕೊರೊನಾ 2ನೇ ಅಲೆ ತಡೆಗೆ ಲಾಕ್ ಡೌನ್ ವಿಧಿಸಲಾಗಿದೆ.
ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಜಾರಿಗೊಳಿಸಿರುವ ಸರ್ಕಾರ ಸಣ್ಣ ಬದಲಾವಣೆ ತಂದಿದೆ.. ಸುಖಾಸುಮ್ಮನೆ ರಸ್ತೆಗೆ ಗಾಡಿ ಇಳಿಸಿದ್ರೆ ಅಂತಹ ಗಾಡಿಗಳನ್ನ ಸೀಜ್ ಮಾಡಲಾಗ್ತಿತ್ತು.. ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದರು.. ಆದ್ರೆ ಇನ್ಮುಂದೆ ಜನ ಅವರವರ ಏರಿಯಾಗಳಲ್ಲಿ ದಿನಸಿ ಖರೀದಿ, ಹಣ್ಣು, ತರಕಾರಿ ಖರೀದಿಗೆ ಸೇರಿ ಅಗತ್ಯ ಕೆಲಸಗಳಿಗೆ ಮಾತ್ರ ವಾಹನಗಳನ್ನು ಬಳಸಬಹುದು ಎಂದು ಡಿಜಿ & ಐಜಿಪಿ ಪ್ರವೀಣ್ ಸೂದ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರವೀಣ್ ಸೂದ್ ಅವರು, ದಿನಸಿ ಖರೀದಿ, ಹಣ್ಣು, ಸೊಪ್ಪು, ತರಕಾರಿ ಖರೀದಿಗೆ ಸಾರ್ವಜನಿಕರಿಗೆ ನಿಮ್ಮ ನಿಮ್ಮ ಏರಿಯಾಗಳಲ್ಲಿ ವಾಹನ ಬಳಸಲು ಅನುಮತಿ ಕೊಡಲಾಗಿದೆ. ಆದರೆ ಅದೇ ಏರಿಯಾದಲ್ಲಿ ಮಾತ್ರ ವೆಹಿಕಲ್ ಬಳಸಲು ಅವಕಾಶ ಕೊಡಲಾಗಿದ್ದು, ಡಿಸ್ಕೌಂಟ್ ಲಾಕ್‍ಡೌನ್ ಅಂತಾ ಏರಿಯಾ ಬಿಟ್ಟು ಬೇರೆ ಕಡೆ ಹೋಗುವಂತಿಲ್ಲ. ಬೇರೆ ಏರಿಯಾಗಳೊಂದಿಗೆ ಅಕ್ಕಪಕ್ಕದ ಏರಿಯಾಗಳಿಗೂ ಸಹ ತೆರಳಲು ಅವಕಾಶವಿಲ್ಲ. ನಿಮ್ಮ ಏರಿಯಾ ಯಾವುದು ಇರುತ್ತೊ ಅದೇ ಏರಿಯಾದಲ್ಲಿ ವೆಹಿಕಲ್ ಬಳಸಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಹತ್ತಿರದ ಅಂಗಡಿಗಳವರೆಗೆ ವಾಹನಗಳನ್ನು ಬಳಸಲು ಅವಕಾಶ ಇದ್ದು ಪ್ರತಿದಿನ ಇದೇ ನೆಪ ಇಟ್ಕೊಂಡು ಓಡಾಡುವಂತಿಲ್ಲ ಎಂದು ತಿಳಿಸಿದ್ದಾರೆ.








