ಮುಂಬೈ: ಜೂನ್30ಕ್ಕೆ ಲಾಕ್‍ಡೌನ್ ಅವಧಿ ಕೊನೆಗೊಂಡರೂ ಮತ್ತೆ ವಿಸ್ತರಣೆ ಮಾಡಲಾಗುವುದು. ಲಾಕ್‍ಡೌನ್ ಸಡಿಲಗೊಳಿಸುವಂತಹ ಸ್ಥಿತಿ ರಾಜ್ಯದಲ್ಲಿ ಇನ್ನೂ ಉದ್ಭವವಾಗಿಲ್ಲ ಎನ್ನುವ ಮೂಲಕ ಮಹಾರಾಷ್ಟ್ರದಲ್ಲಿ ಲಾಕ್‍ಡೌನ್ ಮತ್ತೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಲಾಕ್‍ಡೌನ್ ಸಡಿಲಗೊಳಿಸಬೇಕಾದರೆ ತುಂಬಾ ಕೇರ್ ಫುಲ್ ಆಗಿರಬೇಕು. ಯಾಕೆಂದರೆ ನಾವಿನ್ನೂ ಕೊರೊನಾ ಭೀತಿಯಿಂದ ಮುಕ್ತವಾಗಿಲ್ಲ. ಕೊರೊನಾ ಬರಲ್ಲ ಎಂದು ನಿರಾತಂಕರಾಗಬೇಡಿ. ಅಂತಹ ಸ್ಥಿತಿಗೆ ನಾವು ಬರುವ ಸಮಯಕ್ಕಾಗಿ ಅದು ಕಾದು ಕುಳಿತಿರುತ್ತದೆ. ಹಾಗಾಗಿ ತೀರಾ ತುರ್ತು ಕೆಲಸ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ, ಇಲ್ಲವಾದರೆ ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ರಾಜ್ಯವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಠಾಕ್ರೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ 59 ಸಾವಿರ ದಾಟಿದೆ. ನಿನ್ನೆ ಒಂದೇ ದಿನ 5318 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 167 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಕೊರೊನಾಗೆ 7273 ಮಂದಿ ಬಲಿಯಾಗಿದ್ದಾರೆ.
ಮಹಾ ರಾಷ್ಟ್ರ ರಾಷ್ಟ್ರ
ಪಂಚಮಸಾಲಿ ಪ್ರತಿಭಟನೆ ಗಾಯದ ಮೇಲೆ ‘ಉಪ್ಪು’ ಸವರಿದ CM & ಕಿಚ್ಚು ಹೊತ್ತಿಸಿದ ‘ಪರಂ’..!
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪಂಚಮಸಾಲಿ ಲಿಂಗಾಯತ ಸಮುದಾಯದ ಮೇಲಿನ ಲಾಠಿಚಾರ್ಜ್ ಸಂಬಂಧ ಸಮುದಾಯದ ಹೋರಾಟದ ಕಿಚ್ಚು ಜ್ವಾಲಾಮುಖಿಯಾಗಿ ಸರ್ಕಾರದ ಅಡಿಪಾಯಕ್ಕೆ ಬಿಸಿಮುಟ್ಟಿಸತೊಡಗಿದೆ ಈ ಬಗ್ಗೆ ಇನ್...