Bollywood : ‘ಲಾಕ್ ಅಪ್’ ನಲ್ಲಿ ಪತಿ ಕೊಟ್ಟ ಹಿಂಸೆ ಬಗ್ಗೆ ಪೂನಂ ಮಾತು
ಸದಾ ಒಂದಲ್ಲಾ ಒಂದು ವಿವಾದದಗಳಿಂದಲೇ ಸುದ್ದಿಯಾಗುವ ಬಾಲಿವುಡ್ ಬೋಲ್ಡ್ ನಟಿ ಪೂನಂ ಪಾಂಡೆ ಸದ್ಯ ಬಾಲಿವುಡ್ ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ನಡೆಎಸಿಕೊಡ್ತಿರುವ ರಿಯಾಲಿಟಿ ಶೋ ಲಾಕ್ ಅಪ್ ನಲ್ಲಿ ಪೂನಂ ಪಾಂಡೆ ಭಾಗಿಯಾಗಿದ್ದಾರೆ..
ಶೋನಲ್ಲಿ ಇನ್ನೂ ಹಲವು ಸ್ಪರ್ಧಿಗಳು ಇದ್ಧಾರೆ.. ಆದ್ರೂ ಎಲ್ಲರ ಸೃಷ್ಟಿ ನೆಟ್ಟಿರುವುದು ಮಾತ್ರ ಪೂನಂ ಪಾಂಡೆಯ ಕಡೆಯೇ.. ಅಂದ್ಹಾಗೆ ಪೂನಂ ತಮ್ಮ ಜೀವನದ ಕಹಿ ಘಟನೆಗಳ ಬಗ್ಗೆ ಎಳೆಎಳೆಯಾಗಿ ಮುಚ್ಚುಮರೆಯಿಲ್ಲದೇ ಶೋ ಮೂಲಕ ಬಹಿರಂಗ ಪಡಿಸುತ್ತಿದ್ದಾರೆ.. ಅಷ್ಟೇ ಅಲ್ದೇ ಪೂನಂ ಮಾತಿಗೆ ಖುದ್ದು ಕಂಗನಾ ತಲೆಕೆಡಿಸಿಕೊಂಡಿದ್ಧಾರೆ.
ಅಂದ್ಹಾಗೆ ಈ ಹಿಂದೆ ಪೂನಂ ತಮ್ಮ ಮಾಜಿ ಪತಿ ಸ್ಯಾಮ್ ಬಾಂಬೆ ಬಗ್ಗೆ ಮಾತನಾಡಿ ಆತ ತಮಗೆ ಯಾವೆಲ್ಲಾ ರೀತಿ ದೈಹಿಕವಾಗಿ ಚಿತ್ರ ಹಿಂಸಿಸುತ್ತಿದ್ದರು ಎಂಬುದನ್ನ ಹೇಳಿಕೊಂಡಿದ್ದರು. ಇದೀಗ ಲಾಕ್ ಅಪ್ ಶೋನಲ್ಲಿ ನಲ್ಲಿ ಮಾಜಿ ಪತಿ ಬಗ್ಗೆ ಮಾತನಾಡಿರುವ ಪೂನಂ ಅವನ ಜೊತೆ ಬದುಕುವುದಕ್ಕಿಂತ ಜೈಲಿನಲ್ಲಿ ಇರುವುದು ಎಷ್ಟೇ ವಾಸಿ ಎಂದು ನೋವು ಹಂಚಿಕೊಂಡಿದ್ದಾರೆ.
ಆ ದಿನಗಳು ನನಗೆ ನರಕಯಾತನೆ… ನಾನು ಮಲಗುವ ಕೋಣೆಗೆ ಬೀಗ ಹಾಕಿಕೊಂಡು ಹೋಗುತ್ತಿದ್ದ… ನನ್ನ ಅನುಮಾನದಿಂದಲೇ ನೋಡುತ್ತಿದ್ದ ಎಂದು ತಾವು ಅನುಭವಿಸಿದ ಚಿತ್ರಹಿಂಸೆಗಳ ಬಗ್ಗೆ ಹೇಳಿಕೊಂಡಿದ್ಧಾರೆ. ಜೈಲಿನ ಕಾನ್ಸೆಪ್ಟ್ ಹೊಂದಿರುವ ಈ ರಿಯಾಲಿಟಿ ಶೋ ನೋಡೋದಕ್ಕೆ ಜೈಲಿನಂತೆಯೇ ಇದೆ. ಈ ಶೋನಲ್ಲಿ ಭಾಗಿಯಾಗಿರುವ ಪೂನಂ ಈ ಜೈಲೇ ಎಷ್ಟೋ ನೆಮ್ಮದಿ ಕೊಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.