ಲೋಕಸಭೆಯಲ್ಲಿ ತೀವ್ರ ಗದ್ದಲ : ಜು.26ಕ್ಕೆ ಕಲಾಪ ಮುಂದೂಡಿಕೆ
ನವದೆಹಲಿ : ಇಂದು ಕೂಡ ಲೋಕಸಭೆಯಲ್ಲಿ ಗದ್ದಲ ಮುಂದುವರೆದ ಕಾರಣ ಜುಲೈ 26ಕ್ಕೆ ಕಲಾಪವನ್ನು ಮುಂದೂಡಲಾಗಿದೆ.
ಇದರೊಂದಿಗೆ ಜುಲೈ 19ರಿಂದಲೂ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದರೂ 3 ದಿನಗಳ ಅಧಿವೇಶನ ಗದ್ದಲ ಗಲಾಟೆಗೆ ಬಲಿಯಾಗಿದೆ.
ವಿಪಕ್ಷಗಳು ಉಭಯ ಸದನಗಳಲ್ಲಿ ಇಂಧನ ಬೆಲೆ ಏರಿಕೆ, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಿರ್ವಹಣೆ, ರೈತರ ಪ್ರತಿಭಟನೆ, ಲಸಿಕೆಯ ಕೊರತೆಗಿಂತ ಪೆಗಾಸಸ್ ಬೇಹುಗಾರಿ ವಿಷಯಗಳನ್ನೆತ್ತುಕೊಂಡು ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್, ಡಿಎಂಕೆ, ಶಿವಸೇನೆಯ ಸಂಸದರು ಸಂಸತ್ತು ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಭಟನೆ ಬಳಿ ಪ್ರತಿಭಟನೆ ಆರಂಭಿಸಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪೆಗಾಸಸ್ ಸಾಫ್ಟ್ ವೇರ್ ಅನ್ನು ಇಸ್ರೇಲ್ ಆಯುಧವಾಗಿ ಬಳಸಲು ತಯಾರಿಸಿದ್ದು, ಅದನ್ನ ಭಯೋತ್ಪಾದಕರ ವಿರುದ್ಧ ಬಳಸಬೇಕಿತ್ತು.
ಆದರೆ, ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಭಾರತೀಯರ ವಿರುದ್ಧ ಬಳಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.