ರಾಜ್ಯದಲ್ಲಿ ನೈಟ್ ಕಪ್ರ್ಯೂ ಜಾರಿ ಇಲ್ಲ-ಬಿಎಸ್‍ವೈ
ಬೆಂಗಳೂರು: ಲಂಡನ್‍ನಲ್ಲಿ ಕಾಣಿಸಿಕೊಂಡ ರೂಪಾಂತರಗೊಂಡ ಹೊಸ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯುರಪ್ಪ ಕಟ್ಟೆಚ್ಚರಕ್ಕೆ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಹೊಸ ಕೊರೊನಾ ಸೋಂಕು ಹರಡದಂತೆ ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವರ್ಷ ಹೊಸ ವರ್ಷದ ಆಚರಣೆಗೆ ಅವಕಾಶ ನೀಡುವುದಿಲ್ಲ. ಹೊಸ ವರ್ಷಾಚರಣೆ ಬೇಡ ಎಂದು ಜನತೆಗೆ ಹೇಳಿದ್ದೇವೆ. ಆದರೂ, ಸದ್ಯಕ್ಕೆ ರಾಜ್ಯದಲ್ಲಿ ನೈಟ್ ಕಪ್ರ್ಯೂ ಜಾರಿ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಬ್ರಿಟನ್‍ನಿಂದ ಚೆನ್ನೈಗೆ ಬಂದ ವ್ಯಕ್ತಿಯೊಬ್ಬರಿಹೆ ಹೊಸ ಕೊರೊನಾ ಸೋಂಕು ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎಷ್ಟು ಕಟ್ಟೆಚ್ಚರ ತೆಗೆದುಕೊಂಡರೂ ಕಡಿಮೆಯೇ ಎಂದು ಆತಂಕ ವ್ಯಕ್ತಪಡಿಸಿದರು.
ರೂಪಾಂತರಗೊಂಡ ಹೊಸ ವೈರಸ್ ಇಡೀ ದೇಶ ಹಾಗೂ ರಾಜ್ಯಕ್ಕೆ ಆತಂಕವನ್ನು ತಂದಿದೆ. ಹೀಗಾಗಿ ವಿದೇಶಗಳಿಂದ ಬಂದವರನ್ನು ತಪಾಸಣೆಗೆ ಒಳಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇಂಗ್ಲೆಂಡ್‍ನಿಂದ ಬಂದವರನ್ನು 7 ದಿನಗಳ ಕ್ವಾರಂಟೈನ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ವಿವರ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







