ಬಾಗಲಕೋಟೆ/ಶಿವಮೊಗ್ಗ: ಲಂಡನ್‍ನಲ್ಲಿ ಹೈಸ್ಪೀಡ್ ವೇಗದಲ್ಲಿ ಹಬ್ಬುತ್ತಿರುವ ರೂಪಾಂತರಗೊಂಡಿರುವ ಹೊಸ ಕೊರೊನಾ ವೈರಸ್ ಮಲೆನಾಡು ಶಿವಮೊಗ್ಗ ಹಾಗೂ ಬಾಗಲಕೋಟೆಗೂ ಕಾಲಿಟ್ಟಿದೆಯಾ ಎಂಬ ಪ್ರಶ್ನೆ ಎದುರಾಗಿದೆ.
ಲಂಡನ್‍ನಿಂದ ಬಂದ ಇಬ್ಬರು ಮಹಿಳೆಯರ ಮನೆಯಲ್ಲಿ ಇತರರಿಗೆ ಸೊಂಕು ತಗುಲಿಗೆ. ಇಬ್ಬರು ಮಹಿಳೆಯರ ಕುಟುಂಬದ ತಲಾ ಒಬ್ಬ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದರೆ, ಲಂಡನ್ ನಿಂದ ಬಂದ ಇಬ್ಬರು ಮಹಿಳೆಯರ ವರದಿ ನೆಗೆಟಿವ್ ಬಂದಿದೆ.
ಡಿಸೆಂಬರ್ 10ರಂದು ಅಮೆರಿಕದಿಂದ ಲಂಡನ್ ಮಾರ್ಗವಾಗಿ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರಕ್ಕೆ ಬಂದಿದ್ದ ಮಹಿಳೆ, ಕುಟುಂಬದವರ ಜೊತೆ ವಾಸವಾಗಿದ್ದರು. ಇಂಗ್ಲೆಂಡ್ ನಿಂದ ಬಂದಿದ್ದ ಮಹಿಳೆ ಕೊರೊನಾ ಕ್ಯಾರಿಯರ್ ಆಗಿರುವ ಶಂಕೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕರೆತಂದು ಕೊರೊನಾ ಪರೀಕ್ಷೆ ನಡೆಸಲಾಯಿತು. ಆದರೆ, ಲಂಡನ್ ಮಾರ್ಗವಾಗಿ ಬಂದ ಮಹಿಳೆಗೆ ಸೊಂಕು ನೆಗೆಟಿವ್ ಬಂದಿದ್ದರೆ, ಮಹಿಳಾ ವಾಸವಿದ್ದ ಮನೆಯ ಇನ್ನೋರ್ವ 28 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.
ಹೀಗಾಗಿ ಇದು ರೂಪಾಂತರ ಕೊರೊನಾ ಇರಬಹುದಾ ? ಎಂಬ ಪ್ರಶ್ನೆ ಎದುರಾಗಿದ್ದು, ಗಂಟಲು ದ್ರವದ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್ ಗೆ ರವಾನೆ ಮಾಡಿದ್ದಾರೆ.
ಮತ್ತೊಂದೆಡೆ, ಲಂಡನ್ ನಿಂದ ಜಮಖಂಡಿ ತಾಲ್ಲೂಕಿನ ಗಂಡನ ಮನೆಗೆ ಬಂದ ಮಹಿಳೆಯ ಅತ್ತೆಗೆ ಕೊರೊನಾ ದೃಢಪಟ್ಟಿದೆ. ಜಮಖಂಡಿಯ ಹಳ್ಳಿಗೆ ಬಂದು ಬೆಳಗಾವಿಗೆ ಹೋದ ಮಹಿಳೆಯ 70 ವರ್ಷದ ಅತ್ತೆಗೆ ಕೊರೊನಾ ಪಾಜಿಟಿವ್ ಬಂದಿಎ. ಲಂಡನ್ ನಿಂದ ಜಮಖಂಡಿಗೆ ಬಂದ ಮಹಿಳೆಗೆ ಈಗಾಗಲೇ ನೆಗೆಟಿವ್ ಬಂದಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಲಂಡನ್ ಮಹಿಳೆ ಹಾಗೂ ಅವರ ಅತ್ತೆಯ ಗಂಟಲು ಮಾದರಿ ನಿಮ್ಹಾನ್ಸ್ ರವಾನೆ ಮಾಡಲಾಗದೆ ಎಂದು ಬಾಗಲಕೋಟೆ ಡಿಹೆಚ್‍ಒ ಅನಂತ ದೇಸಾಯಿ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ
ಬ್ರಿಟನ್‍ನಿಂದ ಶಿವಮೊಗ್ಗ ಬಂದಿರುವ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ನಾಲ್ವರು ಶಿವಮೊಗ್ಗದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆದ ವಾರ ಲಂಡನ್‍ನಿಂದ ಶಿವಮೊಗ್ಗಕ್ಕೆ 23 ಮಂದಿ ಬಂದಿದ್ದಾರೆ. ಇವರಲ್ಲಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇವರಿಗೆ ತಗುಲಿರುವ ವೈರಸ್ ಬ್ರಿಟನ್ ವೈರಸ್ಸಾ ? ಕೋವಿಡ್-19 ವೈರಸ್ಸಾ ಎಂಬುದನ್ನು ಪತ್ತೆ ಹಚ್ಚಲು ಗಂಟಲು ದ್ರವದ ಮಾದರಿಯಲ್ಲಿ ಪುಣೆಯ ಲ್ಯಾಬ್‍ಗೆ ರವಾನೆ ಮಾಡಲಾಗಿದೆ.
ಹೀಗಾಗಿ ಮಲೆನಾಡು ಶಿವಮೊಗ್ಗಕ್ಕೂ ಈಗ ಲಂಡನ್ ಕೊರೊನಾ ಭೀತಿ ಶುರುವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel