ಲವ್ ಬ್ರೇಕಪ್ : ಪ್ರಿಯತಮೆ ಮೇಲೆ ನಡುರಸ್ತೆಯಲ್ಲೇ ಚಾಕುವಿಂದ ಹಲ್ಲೆ ನಡೆಸಿದ ಪಾಗಲ್..!
ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ ಪ್ರೇಮಿಯೋರ್ವ ಆಕೆ ಕೈ ಕೊಟ್ಟ ಹಿನ್ನೆಲೆ , ನಡುರಸ್ತೆಯಲ್ಲೇ ಬೈಕ್ ನಲ್ಲಿ ಹೋಗುವಾಗ ಯುವತಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ. ನಂದಿನಿ ಲೇಔಟ್ ನ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಆರೋಪಿಯನ್ನ ಮಂಜುನಾಥ ಎಂದು ಗುರುತಿಸಲಾಗಿದೆ. ಈ ಇಬ್ಬರು ಸುಮಾರು 2 ವರ್ಷಗಳ ಪ್ರೀತಿಸಿದ್ದಾರೆ. ಕಳೆದ ವರ್ಷ ಆಗಸ್ಟ್ ನಲ್ಲಿ ಇವರು ಬ್ರೇಕ್ ಮಾಡಿಕೊಂಡಿದ್ದರು. ಬಳಿಕ ಯುವಕನ ಜೊತೆ ಸಂಪರ್ಕ ಕಡಿದುಕೊಂಡಿದ್ದಳು. ಆದ್ರೂ ದೀಪಕ್ ಪ್ರತಿನಿತ್ಯ ಹಿಂಸೆ ಕೊಡ್ತಿದ್ದ ಎನ್ನಲಾಗಿದೆ. ಈತ ಹಲವಾರು ಬಾರಿ ಬೇರೆ ಬೇರೆ ಫೋನ್ ನಂಬರ್ ನಿಂದ ಆಕೆಗೆ ಕರೆ ಮಾಡಿ ಹಿಂಸೆ ನೀಡ್ತಿದ್ದ ಎನ್ನಲಾಗಿದೆ.
ಮಸಾಜ್ ಸೆಂಟರ್ ಕರ್ಮಕಾಂಡ : ಸ್ಪಾ ಹೆಸರಲ್ಲಿ ಅಕ್ರಮಚಟುವಟಿಕೆ..! 3 ಯುವತಿಯರ ರಕ್ಷಣೆ..!
ಕಳೆದ 15 ದಿನಗಳ ಹಿಂದೆ ಯುವತಿ ಮನೆ ಬಳಿ ಬಂದು ಗಲಾಟೆ ಮಾಡಿದ್ದ ಈ ಪಾಗಲ್ ಪ್ರೇಮಿ ಇದೀಗ . ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಬೆನ್ನು, ಹೊಟ್ಟೆ, ತಲೆ, ಕೈ ಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ನಂದಿನಿ ಲೇಔಟ್ ಪೊಲೀಸರಿಗೆ ಯುವತಿಯ ಪೋಷಕರು ನೀಡಿದ್ದ ದೂರಿನ ಆಧಾರದ ಮೇಲೆ ಪಾಗಲ್ ಪ್ರೇಮಿ ದೀಪಕ್ ನನ್ನ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೊಳಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








