love jihad
ರಾಜಸ್ಥಾನ: ‘ಲವ್ ಜಿಹಾದ್’ ಕುರಿತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹೌದು ದೇಶವನ್ನು ಕೋಮು ದ್ವೇಷದ ಮಾರ್ಗದಲ್ಲಿ ವಿಭಜಿಸಲು ಈ ಪದವನ್ನು ಬಿಜೆಪಿಯೇ ಸೃಷ್ಟಿಸಿದೆ ಎಂದು ಗೆಹಲೋಟ್ ಅವರು ಗಂಭೀರವಾಗಿ ಆರೋಪಿಸಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಇತ್ತೀಚೆಗೆ ಇಡೀ ದೇಶಾದ್ಯಂತ ‘ಲವ್ ಜಿಹಾದ್ ‘ ಭಾರೀ ಚರ್ಚೆಯಲ್ಲಿದೆ. ಇತ್ತೀಚೆಗೆ ಹರಿಯಾಣದಲ್ಲಿ ಯುವತಿಯನ್ನ ಹಾಡುಹಹಗಲೇ ಕೊಲೆ ಮಾಡಿದ ಬಳಿಕ ಲವ್ ಜಿಹಾದ್ ನಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಬಿಜೆಪಿ ಆಡಳಿತವಿರುವ ಕೆಲ ರಾಜ್ಯಗಳು ಮುಂದಾಗಿವೆ. ಇದರಲ್ಲಿ ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ , ಹರಿಯಾಣಗಳೂ ಇವೆ. ‘ಲವ್ ಜಿಹಾದ್’ ನಿಯಂತ್ರಿಸಲು ನಿರ್ದಿಷ್ಟ ಕಾನೂನುಗಳನ್ನು ರೂಪಿಸುವುದಾಗಿ ಸರ್ಕಾರಗಳು ಮುಂದಾಗಿದೆ. ಆದ್ರೆ ಇದರ ಬೆನ್ನಲ್ಲೇ ಲವ್ ಜಿಹಾದ್ ವಿಚಾರವಾಗಿ ಕಿಡಿಕಾರಿರುವ ಗೆಹಲೋಟ್ ಅಂತರ್ ಧರ್ಮೀಯ ಒಕ್ಕೂಟಗಳು ಸೇರಿದಂತೆ ಮದುವೆಗಳು ವೈಯಕ್ತಿಕ ಸ್ವಾತಂತ್ರ್ಯದ ವಿಚಾರಗಳಾಗಿವೆ. ಅವುಗಳನ್ನು ಹತ್ತಿಕ್ಕಲು ರೂಪಿಸುವ ಯಾವುದೇ ಕಾನೂನುಗಳು ನ್ಯಾಯಾಲಯದಲ್ಲಿ ನಿಲ್ಲಲಾರವು ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಗೆಹಲೋಟ್ ಅವರು ‘ ಲವ್ ಜಿಹಾದ್ ಎನ್ನುವುದು ದೇಶವನ್ನು ವಿಭಜಿಸಲು ಮತ್ತು ಕೋಮು ಸೌಹಾರ್ದತೆಯನ್ನು ಕದಡಲು ಬಿಜೆಪಿ ಹುಟ್ಟುಹಾಕಿರುವ ಪದ ಎಂದು ಆರೋಪಿಸಿದ್ದಾರೆ. ಇನ್ನೂ ಮದುವೆ ಎನ್ನುವುದು ವೈಯಕ್ತಿಕ ಸ್ವಾತಂತ್ರ್ಯದ ವಿಚಾರ. ಅದನ್ನು ಹತ್ತಿಕ್ಕಲು ಕಾನೂನು ತರುವುದು ಸಂಪೂರ್ಣವಾಗಿ ಅಸಾಂವಿಧಾನಿಕ ಮತ್ತು ಅದು ಯಾವುದೇ ಕಾನೂನಿನ ನ್ಯಾಯಾಲಯದಲ್ಲಿ ನಿಲ್ಲಲಾರದು. ಲವ್ ನಲ್ಲಿ ಜಿಹಾದ್ ಗೆ ಜಾಗವೇ ಇರುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ ‘ಇದು ಕೋಮು ಸಾಮರಸ್ಯವನ್ನು ಕದಡಲು, ಸಾಮಾಜಿಕ ಸಂಘರ್ಷಕ್ಕೆ ಎಣ್ಣೆ ಸುರಿಯುವಂತೆ ಮಾಡಲು ಮತ್ತು ಸರ್ಕಾರವು ಯಾವುದೇ ನೆಲೆಯಲ್ಲಿ ನಾಗರಿಕರ ಮೇಲೆ ತಾರತಮ್ಯ ಮಾಡಬಾರದು ಎಂಬ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುವ ಸಂಚಿನಂತೆ ಕಾಣುತ್ತದೆ’ ಎಂದು ಕಿಡಿಕಾರಿದ್ದಾರೆ.
‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಬಿಜೆಪಿ ಆಡಳಿತ ರಾಜ್ಯಗಳು ಸಜ್ಜು..!
ಇನ್ನೂ ಗೆಹಲೋಟ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು, ‘ಆತ್ಮೀಯ ಅಶೋಕ್ ಅವರೇ, ಲವ್ ಜಿಹಾದ್ ಒಂದು ಬಲೆಯಾಗಿದ್ದು, ಮದುವೆ ವೈಯಕ್ತಿಕ ವ್ಯವಹಾರ ಎಂದು ನಂಬಿದ ಸಾವಿರಾರು ಯುವ ಮಹಿಳೆಯರು ಬಳಿಕ ಅದು ಹಾಗಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅದು ವೈಯಕ್ತಿಕ ಸ್ವಾತಂತ್ರ್ಯದ ವಿಚಾರವಾಗಿದ್ದರೆ, ಮಹಿಳೆಗೆ ಏಕೆ ಅವರ ಮೂಲ ಹೆಸರು ಅಥವಾ ಧರ್ಮವನ್ನು ಉಳಿಸಿಕೊಳ್ಳಲು ಬಿಡುವಷ್ಟು ಸ್ವಾತಂತ್ರ್ಯ ನೀಡುತ್ತಿಲ್ಲ?’ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಅನೇಕ ಬಿಜೆಪಿ ಮುಖಂಡರು ಗೆಹಲೋಟ್ ಹೇಳಿಕೆಯಿಂದ ಆಕ್ರೋಶಗೊಂಡಿದ್ದಾರೆ. ಸದ್ಯ ಲವ್ ಜಿಹಾದ್ ವಿರುದ್ಧ ಕರ್ನಾಟಕ, ಹರಿಯಾಣ, ಉತ್ತರಪ್ರದೇಶ, ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ಕಠಿಣ ಕಾನೂನು ಕ್ರಮ ತರಲು ಹೊರಟಿವೆ.
love jihad
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








