ಮತಾಂತರ ಆಗಿಹೋಗಿದೆ.. ಮುಸ್ಲಿಂ ಆಗಿದ್ದೇನೆ.. 3 ತಿಂಗಳ ಗರ್ಭಿಣಿ: ಗಂಡನನ್ನು ಬಿಟ್ಟುಬಿಡಿ..!
ಉತ್ತರ ಪ್ರದೇಶ: ಯುಪಿಯಲ್ಲಿ ನೂತನ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ಬೆನ್ನಲ್ಲೇ ಭಜರಂಗದಳದವರು ಎಲ್ಲೆಡೆ ಚುರುಕಾಗಿದ್ದಾರೆ. ಆಮಿಷ ಒಡ್ಡಿ, ಬಲವಂತವಾಗಿ, ಬೆದರಿಕೆ ಹಾಕಿ ಮತಾಂತರ ಮಾಡಿ ಮದುವೆ ಮಾಡಿಕೊಂಡಿರುವ ಪ್ರಕರಣಗಳ ಆರೋಪಿಗಳನ್ನ ಹಿಡಿದು ಜೈಲಿಗಟ್ಟುತ್ತಿದ್ದಾರೆ.
ಇಂತಹದ್ದೇ ಒಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ರಶೀದ್ ಅಲಿ ಎಂಬ ಯುವಕನನ್ನೂ ಇದೇ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಆದ್ರೆ ಮತಾಂತರ ಆಗಿ ಹೋಗಿದೆ. ನಾನೀಗ 3 ತಿಂಗಳ ಗರ್ಭಿಣಿ ದಯಮಾಡಿ ನನ್ನ ಪತಿಯನ್ನ ಬಿಟ್ಟುಬಿಡಿ ಎಂದು ಆತನ ಪತ್ನಿ 21 ವರ್ಷದ ಯುವತಿ ಇದೀಗ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಸಹೋದ್ಯೋಗಿಗಳ ಸ್ನಾನದ ಧೃಶ್ಯ ಸೆರೆ.. ಪ್ರಿಯಕರನಿಗೆ ರವಾನೆ… ಕಾರಣವೇ ವಿಚಿತ್ರ…!
ಹೌದು ಅದ್ಯಾಗ ಯುವತಿಯ ಪಾಲಕರು ಮದುವೆಯ ವಿರುದ್ಧ ಹೇಳಿಕೆ ನೀಡಿದ್ರೋ ಆಗಲೇ ಪತಿಯನ್ನ ಅರೆಸ್ಟ್ ಮಾಡಲಾಗಿತ್ತು. ಪೋಷಕರ ಪ್ರಕಾರ ಯುವತಿಯನ್ನ ಬಲವಂತವಾಗಿ ಮತಾಂತರ ಮಾಡಿ ವಿವಾಹವಾಗಲಿದೆ ಎನ್ನಲಾಗಿದೆ. ಪೋಷಕರು ದೂರಿನ ಅನ್ವಯ ಪಿಂಕಿಯನ್ನು ರಶೀದ್ ಹಾಗೂ ಆತನ ಕುಟುಂಬಸ್ಥರು ಬಲವಂತದಿಂದ ಮತಾಂತರ ಮಾಡಿರುವುದಾಗಿ ಆರೋಪಿಸಿ ಭಜರಂಗದಳದ ಕಾರ್ಯಕರ್ತರು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಆದ್ರೆ ಐದು ತಿಂಗಳ ಹಿಂದೆ ಮದುವೆಯಾಗಿದೆ, ಈಗ ನಾನು ಮೂರು ತಿಂಗಳ ಗರ್ಭಿಣಿ. ಆದ್ದರಿಂದ ಪತಿಯನ್ನು ಬಿಡುಗಡೆ ಮಾಡಲು ಪೊಲೀಸರಿಗೆ ಆದೇಶಿಸಿ ಎಂದು ಯುವತಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾಳೆ.
ದೆಹಲಿಯಲ್ಲಿ ರೈತರ ಪ್ರತಿಭಟನೆ : ನಿತ್ಯ 3,500 ಕೋಟಿ ನಷ್ಟ
ಅಲ್ಲದೇ ಬಲವಂತದ ಮದುವೆಯನ್ನ ತಳ್ಳಿ ಹಾಕಿದ ಯುವತಿ ನಾನು ವಯಸ್ಕಳು. ಮದುವೆ ತನ್ನ ಇಚ್ಛೆಯಂತೆ ಆಗಿದೆ. ಈಗ ನಾನು ಮತಾಂತರವಾಗಿ ಮುಸ್ಲಿಂ ಆಗಿಹೋಗಿದ್ದೇನೆ. ಅಲ್ಲದೇ ಗರ್ಭಿಣಿ ಕೂಡ ದಯಮಾಡಿ ನನ್ನ ಗಂಡನನ್ನ ಬಿಡಗುಡೆ ಮಾಡಿ ಎಂದು ಬೇಡಿಕೊಂಡಿದ್ದಾಳೆ. ಸದ್ಯ ಈ ಕೇಸ್ ಇನ್ನೂ ತನಿಖಾ ಹಂತದಲ್ಲಿದೆ.
ಹೆಂಡತಿ ಹುಡುಗಾಟಕ್ಕೆ ಬಲಿಯಾದ ಪತಿ: ಅಸಲಿಗೆ ಆಗಿದ್ದೇನು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel