ಲವ್ ಜಿಹಾದ್ ಗೆ ಬ್ರೇಕ್ ಹಾಕಲು ಕಠಿಣ ಕಾಯ್ದೆ ಜಾರಿಗೊಳಿಸಬೇಕು : ಸಿ.ಟಿ.ರವಿ
ಮಂಗಳೂರು : ಲವ್ ಜಿಹಾದ್, ಮೋಸದ ಮತಾಂತರಕ್ಕೆ ಕಡಿವಾಣ ಹಾಕಲು ಕಠಿಣ ಕಾಯ್ದೆ ಜಾರಿಗೊಳಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಲವ್ ಜಿಹಾದ್ ಗೆ ಕಡಿವಾಣ ಹಾಕಲು ಕಠಿಣ ಕಾಯ್ದೆ ಜಾರಿಗೊಳಿಸಬೇಕು ಎಂದು ನಾನು ಈಗಾಗಲೇ ಟ್ವೀಟ್ ಮಾಡಿದ್ದೇನೆ.
ಮುಖ್ಯಮಂತ್ರಿಗಳಿಂದ ಹಿಡಿದು ಎಲ್ಲ ಸಚಿವರು ಕಾಯ್ದೆ ತರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಕಾಯ್ದೆ ಆಗಲಿ ಎಂದು ಅಪೇಕ್ಷಿಸುತ್ತೇನೆ ಎಂದು ತಿಳಿಸಿದರು.
ಈ ಲವ್ ಜಿಹಾದ್ ನಿಂದಾಗಿ ಬಹಳಷ್ಟು ಮಂದಿ ಅಸಹಾಯಕರಾಗಿದ್ದಾರೆ. ನಾನು ಲವ್ ಜಿಹಾದ್ ಬಗ್ಗೆ ಟ್ವೀಟ್ ಮಾಡಿದ ಬಳಿಕ ಹತ್ತಾರು ದೂರವಾಣಿ ಕರೆಗಳು ನನಗೆ ಬಂದಿವೆ.
ಆದ್ದರಿಂದ ಟೋಲ್ ಫ್ರೀ ಸಂಖ್ಯೆಯನ್ನು ನೀಡಿದಲ್ಲಿ ಸಾವಿರಾರು ಮಂದಿ ತಮ್ಮ ಅಹವಾಲು ನೀಡಬಹುದು.
ಇದನ್ನೂ ಓದಿ : ಆಶ್ರಮದ ಮಕ್ಕಳ ಜೊತೆ ಬಿ.ವೈ.ವಿಜಯೇಂದ್ರ ಹುಟ್ಟುಹಬ್ಬ ಆಚರಣೆ
ಲವ್ ಜಿಹಾದ್ ನಿಂದಾಗಿ ಎಷ್ಟೋ ಮಂದಿ ತಮ್ಮ ಮಗಳು ಸತ್ತು ಹೋದಳೆಂದು ದುಃಖಿತರಾಗಿದ್ದಾರೆ.
ಕೆಲವಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದೂ ಇದೆ. ಹಾಗಾಗಿ ಇದು ಕೊನೆಯಾಗಬೇಕು ಎಂದರೆ ಕಠಿಣ ಕ್ರಮ ತೆರಬೇಕು.
ಶುದ್ಧ ಪ್ರೇಮವೇ ಬೇರೆ, ಮತಾಂತರ, ಭಯೋತ್ಪಾದನೆಗಳಿಗೆ ತೊಡಗಿಸಿಕೊಳ್ಳುವ ಉದ್ದೇಶದಿಂದ ತೊಡಗುವ ಪ್ರೇಮವೇ ಬೇರೆ.
ಮೋಸದ ಪ್ರೇಮವನ್ನು ನಾವು ಒಪ್ಪೋದಿಲ್ಲ. ನಾವು ಈ ಬಗ್ಗೆ ಬಹಳ ಸ್ಪಷ್ಟವಾಗಿದ್ದು, ಕಾನೂನಿನ ನೆಲೆಯಲ್ಲಿ ಕಠಿಣ ಕಾಯ್ದೆಯನ್ನು ಜಾರಿಗೊಳಿಸಬೇಕೆಂಬ ಅಪೇಕ್ಷೆ ಇದೆ ಎಂದು ಸಿ.ಟಿ.ರವಿ ತಿಳಿಸಿದರು.
ಇದೇ ವೇಳೆ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವ ಬಗ್ಗೆ ಮಾತನಾಡಿ, ಕಾನೂನು ತನ್ನ ಪಾಡಿಗೆ ತನ್ನ ಕರ್ತವ್ಯ ನಿರ್ವಹಿಸುತ್ತಿದೆ.
ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಕೇಸ್: ಕೆ.ಜೆ ಜಾರ್ಜ್, ಇಬ್ಬರು ಅಧಿಕಾರಿಗಳಿಗೆ ಹೈಕೋರ್ಟ್ ರಿಲೀಫ್
ಅವರು ಅಪರಾಧಿ ಹೌದೋ, ಅಲ್ಲವೋ ಎಂಬುದನ್ನ ನ್ಯಾಯಾಲಯ ತೀರ್ಮಾನಿಸುತ್ತೆ. ಮೇಲ್ನೋಟದ ಸಾಕ್ಷಿಯನ್ನು ಆಧರಿಸಿ ವಿನಯ್ ಕುಲಕರ್ಣಿ ಅವರನ್ನ ಸಿಬಿಐ ವಶಕ್ಕೆ ಪಡೆದುಕೊಂಡಿದೆ. ಹಾಗಾಗಿ ತನಿಖೆ ಮಾಡಲಿ, ಸಿಬಿಐ ಏನು ಹೇಳುತ್ತೆ ನೋಡೋಣ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










