ಪ್ರೀತಿಸಿ ಮದುವೆಯಾಗಲ್ಲ ಎಂದವನ ಕೈಯಿಂದ ಯುವತಿಗೆ ತಾಳಿ ಕಟ್ಟಿಸಿದ ಪೊಲೀಸರು..!
ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿದ್ದ ಯುವಕನ ಜೊತೆಗೆ ಆಕೆಯ ವಿವಾಹವನ್ನ ಗ್ರಾಮಸ್ಥರ ಸಮ್ಮುಖದಲ್ಲಿ ಪೊಲೀಸರೇ ನೆರವೇರಿಸಿರುವ ಘಟನೆ ಶಿರಾದಲ್ಲಿ ನಡೆದಿದೆ. ಬರಗೂರಿನ ಲಕ್ಷ್ಮೀ ದೇವಸ್ಥಾನದಲ್ಲಿ ಪೊಲೀಸರು ಗ್ರಾಮಸ್ಥರ ಸಮ್ಮುಖದಲ್ಲಿ ಈ ಜೋಡಿಯ ಮದುವೆ ನೆರವೇರಿದೆ. ಶಿರಾ ತಾಲೂಕಿನ ಬರಗೂರಿನಲ್ಲಿ ಕೂಲಿ ಕೆಲಸಗಾರರಿಗೆ ಅಡಿಗೆ ಮಾಡಲು ಬಂದಿದ್ದ ದಾವಣಗೆರೆ ಜಿಲ್ಲೆಯ ದಾಸನಕೊಪ್ಪ ಗ್ರಾಮದ ಯುವಕ ರಾಜು ಎಂಬಾತ ಅದೇ ಜಿಲ್ಲೆಯ ಕಲಗಟಕಿ ಗ್ರಾಮದ ಯುವತಿ ಶಿಲ್ಪಾ ಎಂಬುವಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಏನಾಗಿದೆ ಸಮಾಜಕ್ಕೆ.. ಅತ್ಯಾಚಾರಿಗಳಿಗೆ ನಮ್ಮ ಕಾನೂನಿನ ಭಯ ಯಾಕಿಲ್ಲ.. ಹುಡುಗಿಯರಿಗೆ ಬದುಕುವ ಹಕ್ಕೇ ಇಲ್ವಾ..!
ಅಲ್ಲದೇ ಹಲವು ತಿಂಗಳಿಂದ ಇವರು ಧಾರವಾಡದಿಂದ ಬರಗೂರು ಸಮೀಪದ ಹಲವು ಗ್ರಾಮಗಳಲ್ಲಿ ಕದ್ದು-ಮುಚ್ಚಿ ಓಡಾಡುತ್ತಿದ್ದರು ಎನ್ನಲಾಗಿದೆ. ಕೊನೆಗೆ ಕರಿರಾಮನಹಳ್ಳಿಯ ಮನೆ ಯೊಂದರಲ್ಲಿ ರಾತ್ರಿ ವೇಳೆ ಮಲಗಲು ಸ್ಥಳಾವಕಾಶ ಕೊಡಿ ಎಂದು 2ಬಾರಿ ತಂಗಿದ್ದ ಯುವತಿ ಶಿಲ್ಪಾಳ ಮೇಲೆ ಅನುಮಾನ ಗೊಂಡ ಗ್ರಾಮಸ್ಥರು ಬರಗೂರು ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನನ್ನು ಪ್ರಶ್ನಿಸಿದಾಗ ನಾನು ಪ್ರೀತಿಸಿಲ್ಲ. ಮದುವೆಯಾಗುವುದಿಲ್ಲ ಎಂದಿದ್ದಾನೆ.
ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಯುವಕ- ಯುವಿತಿ ತಂದೆ ತಾಯಿಯ ಒಪ್ಪಿಗೆ ಮೇರೆಗೆ ಪೋಲೀಸರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ ನೆರವೇರಿದೆ. ಇದಕ್ಕೆ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿ, ವಧುವಿಗೆ ಬಂಗಾರದ ತಾಳಿ, ವಧು, ವರರಿಗೆ ವಸ್ತ್ರಗಳು, ಹೂವಿನಹಾರ ಸೇರಿದಂತೆ ಶಾಸ್ತ್ರೋಕ್ತವಾಗಿ ಬರಗೂರಿನ ಶ್ರೀಲಕ್ಷ್ಮೀ ದೇಗುಲದಲ್ಲಿ ವಿವಾಹ ನೆರವೇರಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








