OTT: ಲವ್ ಮಾಕ್ಟೇಲ್-2 ಗೆ ಮೊದಲ ಸ್ಥಾನ!
ಡಾರ್ಲಿಂಗ್ ಕೃಷ್ಣ ನಟನೆಯ ಲವ್ ಮಾಕ್ಟೇಲ್ 2 ಸಿನಿಮಾ
ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲವ್ ಮಾಕ್ಟೇಲ್ 2 ಸ್ಟ್ರೀಮಿಂಗ್
ಮಾರ್ಚ್ 15ರ ಮಧ್ಯ ರಾತ್ರಿ ಲವ್ ಮಾಕ್ಟೇಲ್ 2 ರಿಲೀಸ್
ಅಮೆಜಾನ್ ಟಾಪ್ ಹತ್ತು ಸಿನಿಮಾಗಳಲ್ಲಿ ‘ಲವ್ ಮಾಕ್ಟೇಲ್ 2′
ಲವ್ ಮಾಕ್ಟೇಲ್..!! ಸ್ಯಾಂಡಲ್ ವುಡ್ ನಲ್ಲಿ ಸೋತು ಗೆದ್ದ ಸಿನಿಮಾ. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿದ್ದ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು.
ಇದೇ ಜೋಷ್ ನಲ್ಲಿ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ 2 ಸಿನಿಮಾ ಮಾಡಿದರು. ಈ ಸಿನಿಮಾವನ್ನು ಕೂಡ ಪ್ರೇಕ್ಷಕ ಪ್ರಭು ಮೆಚ್ಚಿ ಅಪ್ಪಿಕೊಂಡರು.
ಚಿತ್ರಮಂದಿಗಳಲ್ಲಿ ಒಳ್ಳೆಯ ಕಲೆಕ್ಷನ್ ಕೂಡ ಮಾಡಿತು. ಈಗ ಒಟಿಟಿಯಲ್ಲೂ ‘ಲವ್ ಮಾಕ್ಟೇಲ್ 2’ ಹವಾ ಸೃಷ್ಟಿ ಮಾಡುತ್ತಿದೆ.
ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲವ್ ಮಾಕ್ಟೇಲ್ 2 ಸ್ಟ್ರೀಮಿಂಗ್ ಆರಂಭಿಸಿದ್ದು, ಟ್ರೆಂಡಿಂಗ್ ನಲ್ಲಿದೆ. ಈ ಬಗ್ಗೆ ಸಿನಿಮಾ ತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಮಾರ್ಚ್ 15ರ ಮಧ್ಯ ರಾತ್ರಿ ಸಿನಿಮಾ ರಿಲೀಸ್ ಆಗಿದೆ. ಒಂದು ದಿನ ಪೂರ್ಣಗೊಳ್ಳುವ ಮೊದಲೇ ಸಿನಿಮಾ ದಾಖಲೆ ಬರೆದಿದೆ. ಅಮೆಜಾನ್ ಟಾಪ್ ಹತ್ತು ಸಿನಿಮಾಗಳಲ್ಲಿ ‘ಲವ್ ಮಾಕ್ಟೇಲ್ 2′ ಮೊದಲ ಸ್ಥಾನದಲ್ಲಿ ಇದೆ.
ಇನ್ನು ಒಟಿಟಿ ವಿಚಾರಕ್ಕೆ ಬರುವುದಾದರೆ ಸಿನಿಮಾ ಕನ್ನಡದ ‘ಭಜರಂಗಿ 2′ ಮತ್ತು ‘ಗರುಡ ಗಮನ ವೃಷಭ ವಾಹನ‘ ಸಿನಿಮಾಗಳು ದಾಖಲೆ ಬರೆದಿವೆ.
ರಿಲೀಸ್ ಆದ ಕಡಿಮೆ ಸಮಯದಲ್ಲಿ ಭಜರಂಗಿ 2 ಸಿನಿಮಾ ಅತಿ ವೇಗವಾಗಿ 200 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳ ಗಡಿ ಮುಟ್ಟಿತ್ತು.
ಇನ್ನು ‘ಗರುಡ ಗಮನ ವೃಷಭ ವಾಹನ‘ ಚಿತ್ರ ಕೂಡ 8 ಕೋಟಿ ಸ್ಟ್ರೀಮಿಂಗ್ ನಿಮಿಷಗಳನ್ನು ಅತಿ ವೇಗವಾಗಿ ದಾಟಿ ದಾಖಲೆ ಬರೆದಿದೆ. love mocktail – 2 gets first place in OTT platform









