ಸ್ಯಾಂಡಲ್ವುಡ್ ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಬಳಿಕ ಮತ್ತೊಂದು ಸ್ಯಾಂಡಲ್ವುಡ್ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ. ಹೌದು, ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಲವ್ ಮಾಕ್ಟೇಲ್’ ಜೋಡಿ ವಿವಾಹ ಮಾಡಿಕೊಳ್ಳುವ ಬಗ್ಗೆ ಪ್ರೆಸ್ ಮೀಟ್ ವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇಬ್ಬರಿಗೂ ಲವ್ ಆಗಿದೆ ಎಂದು ಸ್ವತಃ ಲವ್ ಮಾಕ್ಟೇಲ್ ಸಕ್ಸಸ್ ಪ್ರೇಸ್ ಮೀಟ್ನಲ್ಲಿ ಹೇಳಿಕೆ ನೀಡಿ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ ಮೊದಲ ಬಾರಿ ಈ ತಾರಾ ಜೋಡಿ ಕಾಣಿಸಿಕೊಂಡಿತ್ತು. ಬಳಿಕ
ಚಂದ್ರಲೇಖ ರಿಟರ್ನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು, ಈ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಇದೀಗಾ ಲವ್ ಮಾಕ್ಟೇಲ್ ಯಶಸ್ಸಿನಲ್ಲಿ ತೇಲುತ್ತಿರುವ ಈ ಜೋಡಿ ಪ್ರೇಸ್ ಮೀಟ್ ನಡೆಸಿ ತಮ್ಮ ಲವ್ ಸ್ಟೋರಿ ಬಗ್ಗೆ ಬಿಚ್ಚು ಮಾತನಾಡಿದ್ದಾರೆ.
ಮಿಲನಾ ನಾಗರಾಜ ಮೂಲತಹ ಹಾಸನ ಜಿಲ್ಲೆಯವರು, ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿರುವ ಮಿಲನಾ ರಾಜ್ಯಮಟ್ಟದ ಈಜುಗಾರ್ತಿ ಕೂಡ ಹೌದು. ಮಿಲನಾ ಬಳಿ ಮದರಂಗಿ ಕೃಷ್ಣ ತಮ್ಮ ಪ್ರೀತಿಯನ್ನ ಹೇಳಿಕೊಳ್ಳುತ್ತಿದ್ದಂತೆಯೇ ಮದುವೆ ಮಾತುಕತೆ ನಡೆಯಿತು. ಎರಡೂ ಕುಟುಂಬದವರಿಂದ ಒಪ್ಪಿಗೆ ಸಿಕ್ಕಿದ್ದರಿಂದ ಮದುವೆ ಆಗಲು ಮಿಲನಾ-ಕೃಷ್ಣ ನಿರ್ಧರಿಸಿದರಂತೆ ಎಂದು ಬಹಿರಂಗ ಪಡಿಸಿದ್ದಾರೆ. ಸದ್ಯ ಸಿನಿಮಾ ಚಟುವಟಿಕೆಗಳಲ್ಲಿ ಇಬ್ಬರೂ ಬ್ಯುಸಿ ಆಗಿರುವುದರಿಂದ ಸದ್ಯಕ್ಕಂತೂ ಮದುವೆ ಡೇಟ್ ಫಿಕ್ಸ್ ಆಗಿಲ್ಲ ಎಂದು ಮಿಲನಾ ತಿಳಿಸಿದ್ದಾರೆ.